ಬೆಳಗಾವಿ : ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವವರನ್ನು ತಕ್ಷಣವೇ ಬಂಧಿಸಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗ ವತಿಯಿಂದ, ಬುಧವಾರ ನಗರದ ಹುತಾತ್ಮ ಚೌಕ್ ಬಳಿ ಸಹಿ ಸಂಗ್ರಹ ಅಭಿಯಾನ ನಡೆಸಿದರು. ಲಕ್ಷಾಂತರ ರೂ. ಹಣ ಗಳಿಸುವ ಹುನ್ನಾರದಲ್ಲಿ ಡ್ರಗ್ ಮಾಫೀಯಾ ನಡೆಸುತ್ತಿರುವುದು ಅಕ್ಷಮ್ಯ ಅಪರಾಧ.
ಇದರಲ್ಲಿ ಚಲನಚಿತ್ರ ನಟಿಯರು ಭಾಗಿಯಾಗಿರುವುದು ನಾಚಿಕೆಗೇಡಿತನ ಸಂಗತಿಯಾಗಿದೆ. ಡ್ರಗ್ ಮಾಫೀಯಾದಲ್ಲಿ ತೊಡಗಿಕೊಂಡಿರುವವರು ಯಾರೇ ಇದ್ದರೂ ರಾಜ್ಯ ಸರಕಾರ ಅವರ ವಿರುದ್ಧ ಕ್ರಮ ಕೈಗೊಂಡು ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. ಮೆಡಿಕಲ್ ಕಾಲೇಜ್ ಸೇರಿದಂತೆ ವಿವಿಧ ಕಡೆಯಲ್ಲಿ ಡ್ರಗ್ ಮಾಫಿಯಾ ಅವ್ಯಾಹತವಾಗಿ ಬೆಳೆದಿದೆ. ಇದು ಪೊಲೀಸ್ ಇಲಾಖೆಗೂ ತಿಳಿದಿದೆ. ಕೂಡಲೇ ಡ್ರಗ್ ಪೂರೈಸುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೋಹಿತ ಉಮನಾಬಾದಿಮಠ, ಪೃಥ್ವಿಕುಮಾರ, ಕಿರಣ ದುಕಾನದಾರ, ಕಾರ್ತಿಕ, ಸವೀತಾ ಕುಂಬಾರ, ಪ್ರಜ್ಞಾ, ಶುಭಂ, ರೀತಿಕಾ, ಅಶ್ವೀನಿ ಕಂಚಿ, ಭೂಷಣ, ಶಿವು ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.