ಮನವಿ ಕೊಡಲು ಹೊದಾಗ ಮಹಿಳಾ ಪೋಲಿಸ ಸಿಬ್ಬಂದಿ ಇಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ

  • 14 Jan 2024 , 11:34 PM
  • Belagavi
  • 113

ಬೆಳಗಾವಿ: ಖಾನಾಪೂರ ತಾಲೂಕಿನ ವಿವಿಧ ಗ್ರಾಮಗಳ ಸಮಸ್ಯೆಗಳ ಕುರಿತು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆ ಇವರಿಗೆ ದಿನಾಂಕ: 17-09-2020 ರಂದು ಮದ್ಯಾಹ್ನ 12-30 ಗಂಟೆಗೆ ರೈತ ಮುಖಂಡರು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಕಾರ್ಯಕರ್ತರು ಮನವಿ ನೀಡುವ ಸಮಯದಲ್ಲಿ ಮಹಿಳಾ ಪೋಲಿಸ್ ಸಿಬ್ಬಂದಿಗಳಾದ ಸಪಾಟೆ ಎ.ಎಸ್.ಆಯ್ ಹಾಗೂ ಪೋಲಿಸ್ ಕಾನ್ಸಟೇಬಲ್ ಎ.ಎಸ್ . ಗಾವಡೆ ಇವರು ಅರ್ಬನ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಕಮೀಟಿ ಖಾನಾಪೂರದ ಅಧ್ಯಕ್ಷರಾದ ಸೌ , ಅನೀತಾ ಸುರೇಶ ದಂಡಗಲ್ಲ ಅವರನ್ನು ಇಬ್ನರೂ ಪೋಲಿಸ ಸಿಬ್ಬಂದಿಗಳು ನಿಂದಿಸಿದ್ದರು ಮತ್ತೆ ಬಿಜೆಪಿ ಪಕ್ಷದ ಸಂಸದರ ಕಡೆ ನಿಮ್ಮದು ಇಲ್ಲಿ ಏನೂ ಕೆಲಸ ಇಲ್ಲ.

ನೀವು ಇಲ್ಲಿಂದ ಹೊರಟು ಹೋಗಿರಿ ಎಂದು ನಿಂದಿಸಿ ಅವರ ಕೂದಲು ಹಿಡಿದು ಎಳೆದಾಡಿ ಅವ್ಯಾಚ್ಯ ಶಬ್ದಗಳಿಂದ ಬೈದು ಅವಮಾನ ಮಾಡಿದ್ದು , ಇದರಿಂದ ತಾಲೂಕಿನ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳಾ ಅಧ್ಯಕ್ಷರ ಅವಮಾನ ಮಾಡಿರುತ್ತಾರೆ . ಅಲ್ಲದೇ ಈ ಇಬ್ಬರು ಮಹಿಳಾ ಪೋಲಿಸ್ ಸಿಬ್ಬಂದಿಗಳು ಪೋಲಿಸ್ ಕಾನೂನು ದುರ್ಬಳಕೆ ಮಾಡಿಕೊಂಡಿರುತ್ತಾರೆ ,ತಾವು ದಯವಿಟ್ಟು ಸದರಿ ಇಬ್ಬರು ಮಹಿಳಾ ಪೋಲಿಸ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Read All News