ಹಾವೇರಿ: ರಾಜ್ಯದಲ್ಲಿ ಬೃಹತ್ ಪ್ರಮಾಣದ ಟೆಕ್ಸ್ ಟೈಲ್ ಮಿಲ್ಲುಗಳನ್ನು ತೆರೆಯಲು ಹಾಗು ರಾಜ್ಯದಲ್ಲಿ ಈಗಾಗಲೇ ಬಂದ ಆಗಿರುವ ಸಹಕಾರಿ ಕ್ಷೇತ್ರದ ಜವಳಿ ಗಿರಣಿಗಳನ್ನು ಪುನರ್ ಆರಂಬಿಸಲು ಸರಕಾರ ಪ್ರೋತ್ಸಾಹಿಸಬೇಕಿದೆ ಎಂದು ಒತ್ತಾಯಿಸಿ ಹಾವೇರಿ ಜಿಲ್ಲೆ ಬಂಕಾಪುರ ಪಟ್ಟಣದ ಪ್ರಬಂಜನ ಇಂಡಸ್ಟ್ರೀಜ್ ಪಾಲುದಾರ ರಾಘವೇಂದ್ರ ಮೇಲಗಿರಿ ಬೃಹತ್ ಕೈಗಾರಿಕಾ ಮಂತ್ರಿ ಜಗದೀಶ ಶೆಟ್ಟರ ರವರಿಗೆ ಪ್ರಸ್ತಾವನೆ ಸಲ್ಲಿಸಿದರು. ನಮ್ಮರಾಜ್ಯದಲಿ ವಾರ್ಷಿಕ 3.50 ಲಕ್ಷಟನ್ ಅರಳಿಯನ್ನು ಉತ್ಪಾದಿಸಾಗುತ್ತಿದೆ. ಇದರಲಿ ಶೇ.90 ರಷ್ಟು ಅರಳಿ ನೂಲು ತಯಾರಿಸಲು ಕೊಯುಮತ್ತೂರ ಮಿಲ್‍ಗಳಿಗೆ ರಪ್ತಾದರೆ ಶೇ.10 ರಷ್ಟು ಅರಳಿ ಇನ್ನಿತರ ರಾಜ್ಯಗಳಿಗೆ ರವಾನೆಯಾಗುತ್ತದೆ.
ನಮ್ಮ ರಾಜ್ಯದಿಂದ ರಪ್ತಾದ ಅರಳಿಯಿಂದ ತಯಾರಾದ ನೂಲಿನ ಬೆಲೆ 6 ರಿಂದ 7 ಸಾವಿರ ಕೋಟಿ ಬೇಲೆ ಬಾಳುತ್ತದೆ. ಈ ನೂಲನ್ನು ಬಟ್ಟೆ ತಯಾರಿಸಲು ಮಹರಾಷ್ಟ್ರ, ಇಚಲಕರಂಜಿ, ಮಾಲೆಗಾಂವ, ಗುಜರಾತಿನ ಅಹಮ್ಮದಾಬಾದ ನಗರಗಳ ಟೆಕ್ಸ್ ಟೈಲ್ ಗಳಿಗೆ ರವಾನೆಯಾಗುತ್ತದೆ. ಇದರಿಂದ 350 ಕೋಟಿಯಷ್ಟು ಜಿ.ಎಸ್.ಟಿ. ತಮಿಳುನಾಡಿನ ಕೊಯುಮತ್ತೂರ ಪಾಲಾಗುತ್ತದೆ. ನೂಲನ್ನು ರಪ್ತುಮಾಡಿಕೋಂಡು ಬಟ್ಟೆ ತಯಾರಿಸಿದರೆ, ಅದರ ಬೆಲೆ 8 ರಿಂದ 9 ಸಾವಿರ ಕೋಟಿ ಆಗುತ್ತದೆ, ಅದರ ಜಿ.ಎಸ್.ಟಿ. 450 ಕೋಟಿ ರೂ. ಆದಾಯ ಮಹರಾಷ್ಟ್ರ ಮತ್ತು ಗುಜರಾತ ಪಾಲಾಗುತ್ತಿದೆ. ಅಹಮ್ಮದಾಬಾದ, ಇಚಲಕರಂಜಿ, ಸುರತ್ ಗಳಲ್ಲಿ ನಮ್ಮ ರಾಜ್ಯದ ಅರಳಿಯಿಂದಲೇ ತಯಾರಾದ ಬಟ್ಟೆಯ ಶೇ.40 ರಷ್ಟು ಬೆಂಗಳೂರಿನ ಗಾರ್ಮೇಂಟ್‍ಗಳಿಗೆ ಆಮದು ಆಗುತ್ತದೆ. ಶೇ 20 ರಷ್ಟು ಬಟ್ಟೆ ರಾಜ್ಯದ ಇತರ ಬಾಗಗಳಿಗೆ ಆಮದಾಗುತ್ತದೆ.
ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಅರಳಿಯನ್ನು ಇತರೇ ರಾಜ್ಯಕ್ಕೆ ರಪ್ತು ಮಾಡುವುದರಿಂದ 350 ಕೋಟಿ ಜಿ.ಎಸ್.ಟಿ. ಹಾಗು ನೂಲಿನಿಂದ ಬಟ್ಟೆ ತಯಾರಾದ ಮೇಲಿನ 450 ಕೋಟಿಯಷ್ಟು ಜಿ.ಎಸ್.ಟಿ. ಇತರ ರಾಜ್ಯಗಳ ಪಾಲಾಗುವುದಲ್ಲದೇ ನಾವು ಬೆಳೆದ ಅರಳಿಯಿಂದ ಬಟ್ಟೆ ನಮ್ಮ ರಾಜ್ಯಕ್ಕೆ ಆಮದು ಮಾಡಿಕೋಳ್ಳಬೇಕಾದರೂ ಕೂಡಾ ನಾವು ಇತರ ರಾಜ್ಯಗಳಿಗೆ ಜಿ.ಎಸ್.ಟಿ. ಹಣವನ್ನು ಬರಿಸಬೇಕಾಗುತ್ತದೆ. ಇದನ್ನೆಲ್ಲಾ ಮನಗಂಡು ರಾಜ್ಯ ಸರಕಾರ ನಮ್ಮ ರಾಜ್ಯದಲ್ಲಿಯೇ ಬೃಹತ್ ಪ್ರಮಾಣದ ಟೆಕ್ಸ್ ಟೈಲ್ ಮಿಲ್‍ಗಳನ್ನು, ಸ್ಪೀನ್ನಿಂಗ್, ವಿವಿಂಗ್ ಗಳನ್ನು ತೆರೆಯಲು ಉತ್ತೇಜನ ನೀಡಿದ್ದೇ ಯಾದರೆ ರಾಜ್ಯ ಸರಕಾರ ಪ್ರತಿವರ್ಷ ಯಾವುದೇ ಬಂಡವಾಳ ಹೂಡದೇ ಹೊರ ರಾಜ್ಯಗಳ ಪಾಲಾಗುತ್ತಿರುವ ಸುಮಾರು 8 ನೂರು ಕೋಟಿ ರೂಗಳನ್ನು ರಾಜ್ಯದಲ್ಲಿಯೇ ಉಳಿಸಿ ಕೊಳ್ಳಬಹುದಾಗಿದೆ. ಎಂದು ಪ್ರಭಂಜನ ಇಂಡಸ್ಟ್ರೀಜ್ ಪಾಲುದಾರ ರಾಘವೇಂದ್ರ ಮೇಲಗಿರಿ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪ್ರಭಂಜನ ಇಂಡಸ್ಟ್ರೀಜ್ ತೆರೆದು ಸುಮಾರು 5 ನೂರು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟ ರಾಘವೇಂದ್ರ ಮೇಲಗಿರಿ ಯವರ ಈ ಕನಸಿನ ಯೋಜನೆಗೆ ಸರಕಾರ ಪ್ರೋತ್ಸಾಹ ನೀಡಿದರೆ, ಸಮೃದ್ಧ ನಾಡು ನಿರ್ಮಾಣಕ್ಕೆ ಮುನ್ನಡಿ ಇರಿಸಿದಂತಾಗುತ್ತದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಕಳೆದ ಬಜೆಟ್‍ನಲ್ಲಿ ಶಿಗ್ಗಾವಿ ತಾಲೂಕಿನಲ್ಲಿ ಟೆಕ್ಸ್ ಟೈಲ್ ಪಾರ್ಕ ಮಾಡಲು ಸರಕಾರದಿಂದ ಅನುಮೋದನೆ ಕೊಡಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ 10 ಸಾವಿರಕ್ಕಿಂತಲು ಅಧಿಕ ಉದ್ಯೋಗ ಸೃಷ್ಠಿಯಾಗಲಿದೆ. ಇದರ ಶ್ರೇಯಸ್ಸು ಗೃಹಸಚಿವ ಬಸವರಾಜ ಬೊಮ್ಮಾಯಿಯವರಿಗೆ ಲಭಿಸಲಿದೆ. ಇದರ ಜೊತೆಗೆ ರಾಜ್ಯದ ವಿವಿದ ಬಾಗಗಳಲ್ಲಿ ಬೃಹತ್ ಟೆಕ್ಸ್ ಟೈಲ್ ಮಿಲ್ ಗಳನ್ನು ಪ್ರಾರಂಬಿಸಲು ಶೇ 20 ರಷ್ಟು ಹೆಚ್ಚಿನ ಸಬ್ಸಿಡಿ ನೀಡಿ ಸರಕಾರ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ ಪ್ರಭಂಜನ ಇಂಡಸ್ಟ್ರೀಜ್ ಪಾಲುದಾರರಾದ ರಾಘವೇಂದ್ರ ಮೇಲಗಿರಿ.
ರಾಜ್ಯದಲ್ಲಿಟೆಕ್ಸ್ಟೈಲ್ಮಿಲ್‍ಗಳನ್ನುಪ್ರಾರಂಭಿಸುವುದರಿಂದಆಗುವಲಾಭಗಳು
ವಾರ್ಷಿಕ 8 ನೂರು ಕೋಟಿಗಿಂತಲೂ ಅಧಿಕ ಹೊರ ರಾಜ್ಯಗಳ ಪಾಲಾಗುತ್ತಿರುವ ಜಿ.ಎಸ್.ಟಿ. ಆದಾಯವನ್ನು ನಮ್ಮದಾಗಿಸಿಕೊಳ್ಳಬಹುದಾಗಿದೆ.
ಬೃಹತ್ ಪ್ರಮಾಣದ ಟೆಕ್ಸ್ ಟೈಲ್ ಮಿಲ್‍ಗಳಾಗುವುದರಿಂದ ಸುಮಾರು 25 ಸಾವಿರಕ್ಕಿಂತಲೂ ಅಧಿಕ ರಾಜ್ಯದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಬಹುದು.
ಕಚ್ಚಾ ವಸ್ತುಗಳ ಪೂರೈಕೆಗಾಗಿ ಇತರ ರಾಜ್ಯಗಳಿಂದ ಪ್ರತಿನಿತ್ಯ 3 ಸಾವಿರ ಅಧಿಕ ಲಾರಿಗಳ ಸಂಚಾರ, ಇದರಿಂದ ಬರುವ ವಾಹನಗಳ ಪರವಾನಗಿ ಶುಲ್ಕ ಪ್ರತಿದಿನ 20 ಲಕ್ಷಕ್ಕಿಂತಲೂ ಅಧಿಕ ಆದಾಯ ನಮ್ಮ ರಾಜ್ಯಕ್ಕೆ ಲಭಿಸುತ್ತದೆ.
ಹೊರ ರಾಜ್ಯಗಳಿಂದ ಬರುವ ಲಾರಿಗಳ ಇಂದನ ಬಳಕೆಯಿಂದ ಬರುವ ಜಿ.ಎಸ್.ಟಿ. ಆದಾಯವನ್ನು ನಮ್ಮದಾಗಿಸಿಕೋಳ್ಳಬಹುದು. ರಾಜ್ಯದಲ್ಲಿರುವ ಹೊಟೇಲ್, ಕಿರಾಣಿ, ಔಷಧಿ ಸೇರಿದಂತೆ ಸರ್ವ ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ.