ಬೆಳಗಾವಿ: ಸಭ್ಯ, ಸಾಂಸ್ಕೃತಿಕ, ಕಲೆಗಳ ಬೀಡಾದ ನಮ್ಮ ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಡ್ರಗ್ಸ್ ಜಿಹಾದ್ ನ ಅಂತರಾಷ್ಟ್ರೀಯ ಜಾಲ್ ವ್ಯಾಪಕವಾಗಿ ಹರಡಿದೆ ರಾಜ್ಯದ ಘನತೆಗೆ ಮತ್ತು ಯುವ ಜನಾಂಗಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಬೆಳಗಾವಿ ಜಿಲ್ಲಾ ಶ್ರೀರಾಮ್ ಸೇನೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯದ ತುಂಬಾ ಹಲವಾರು ವರ್ಷಗಳಿಂದ ಡ್ರಗ್ಸ್ ಮಾಫಿಯಾ ನಡಿತಾ ಇದೆ ನಮ್ಮ ದೇಶಕ್ಕೆ ಮತ್ತು ರಾಜ್ಯಕ್ಕೆ ಮಾರಕವಾಗಿ ಪರಿಣಾಮ ಬೀರಿದೆ ಇದರಿಂದ ರಾಜ್ಯದ ಯುವಕರ ಮೇಲೆ ದುಸ್ಪರಿಣಾಮ ಬೀರುತ್ತಿದೆ ಆದ್ದರಿಂದ ಶ್ರೀರಾಮ್ ಸೇನೆ ಇದನ್ನು ಖಂಡಿಸುತ್ತದೆ ಹಾಗೇ ಈ ಮಾಫಿಯಾ ವಿರುದ್ಧ ಹೋರಾಡಲು ತಮಗೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಶ್ರೀರಾಮ್ಸೇನೆಯಪ್ರಮುಖಬೇಡಿಕೆಗಳು
1) ಡ್ರಗ್ಸ್ ಮಾರಾಟ ಹಾಗೂ ಸಾಗಾಟ ಮಾಡುವವರನ್ನು ರಾಷ್ಟೀಯ ಸುರಕ್ಷಾ ಕಾಯಿದೆಯಲ್ಲಿ ಬಂಧಿಸುವಂತೆ ಕಾನೂನು ತರಲು ಆಗ್ರಹಿಸುತ್ತೇವೆ.
2) ಶಾಲಾ ಕಾಲೇಜುಗಳ ಪರಿಸರದಲ್ಲಿ ಗುಪ್ತಚರ ಇಲಾಖೆಯ ಗಸ್ತು ಹೆಚ್ಚಿಸಬೇಕು.
)ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡ್ರಗ್ಸ್ ಪತ್ತೆಯಾಗುತ್ತೋ ಆ ಠಾಣಾಧಿಕಾರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಜವಾಬ್ದಾರರನ್ನು ಮಾಡಲು ಒತ್ತಾಯಿಸುತ್ತೇವೆ.
4) ಕೆಲವು ರಾಜಕಾರಣಿಗಳು ದೊಡ್ಡ ದೊಡ್ಡ ಉದ್ದಿಮೆದಾರರು ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ಕುಳಗಳು ಈ ದಂದೆಯ ಹಿಂದೆ ಇರುವುದರ ಬಗ್ಗೆ ತನಿಖೆಗೆ ಆಗ್ರಹಿಸುತ್ತೇವೆ.
5) ಚಿತ್ರರಂಗದಲ್ಲಿಯೂ ಜಾಲ್ ಪಸರಿಸಿದ್ದು ಅದರ ಬಗ್ಗೆಯೂ ವ್ಯಾಪಕ ತನಿಖೆಗೆ ತಂಡ ರಚಿಸಲು ಒತ್ತಾಯಿಸುತ್ತೇವೆ ಎಂದು ತಿಳಿಸಿದರು. ಹಾಗೆಯೇ ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮತ್ತು ದೇಶದ ತುಂಬಾ ಹೋರಾಟ ಮಾಡಲಾಗುವುದು ಎಂದು ಶ್ರೀರಾಮ್ ಸೇನೆ ಬೆಳಗಾವಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು, ಈ ಸಂದರ್ಭದಲ್ಲಿ ವಿನಯ ಅಂಗ್ರೋಳ್ಳಿ, ರವಿ ಕೋಕಿತಕರ, ಶಿವರಾಜ್ ನಾಯ್ಕ್, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.