ಬೆಳಗಾವಿ: ಕುಮಾರಸ್ವಾಮಿ ಮಾತು ಕೇಳಿದ್ರೆ ನಗು ಬರುತ್ತೇ, ಡ್ರಗ್ ಮಾಫಿಯಾದಿಂದ ಅವರ ಸರಕಾರ ಬಿದ್ದಿದೆಯಂದ್ರೆ ಅಂದು ಅವರು ಮುಖ್ಯಮಂತ್ರಿಯಾಗಿರಲಿಕ್ಕೆ ಅಸಮರ್ಥರು ಎಂದಾಯಿತು. ಕುಣಿಯೋಕೆ ಬರಲ್ಲಿಲ್ಲ ಅಂದ್ರೆ ನೆಲ ಡೊಂಕು ಅಂದಂಗಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಇಷ್ಟು ದಿನ ಯಾಕ ಬಾಯಿ ಮುಚ್ಚಕೊಂಡ ಇದ್ರು.
ಕುಮಾರಸ್ವಾಮಿ ಬಳಿ ಗೃಹ ಇಲಾಖೆ ಇಂಟೆಲಿಜೆನ್ಸ್ ಇತ್ತು, ಅವರ ಅಧಿಕಾರದ ವೈಫಲ್ಯದಿಂದಲೇ ಸಮ್ಮಿಶ್ರ ಸರ್ಕಾರ ಬಿದ್ದಿದೆ ಹೊರತು, ಈ ಜೀಜಬಿ ಅಂತಹುದು ಇಂತಹುದರಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಿಲ್ಲ ಎಂದರು. ಡ್ರಗ್ ಮಾಫಿಯಾದಲ್ಲಿ ಯಾವ ರಾಜಕಾರಣಿಗಳೇ ಇರಲಿ, ಅಧಿಕಾರಿಗಳೇ ಇರಲಿ ಎಂಥ ಪ್ರಭಾವಿಗಳಿರಲಿ ಅವರನ್ನ ಮಟ್ಟಹಾಕಿ ಹೆಡೆಮುರಿ ಕಟ್ಟುವ ಕೆಲಸವನ್ನು ಗೃಹ ಇಲಾಖೆ ಮಾಡಲಿದೆ.
ಡ್ರಗ್ಸ್ ತನಿಖೆಯಲ್ಲಿ ಎಷ್ಟೇ ಬಲಾಡ್ಯರಿದ್ದರು ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣ ಸ್ವಾಯತ್ತತೆ ಕೊಡಲಾಗಿದೆ, ಡ್ರಗ್ ಮಾಫಿಯಾ ಹತ್ತಿಕ್ಕಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಈಗಾಗಲೇ ಗೃಹ ಸಚಿವರು ಈ ಕುರಿತು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಯಾರಿಗೂ ಸಂಶಯ ಬೇಡ ಎಂದು ಹೇಳಿದರು.