ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರದಿಂದ ಬಿಡುಗಡೆ ಆದ ಪ್ರೋತ್ಸಾಹ ಧನವನ್ನು ಅಧಿಕಾರಿಗಳು ನೀಡುತ್ತಿಲ್ಲ ಎಂದ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಐದು ತಿಂಗಳಿಂದ ನಾವು ಜೀವದ ಹಂಗು ತೊರೆದು, ಕುಟುಂಬದಿಂದ ದೂರವಿದ್ದೆವೆ, ಆರ್ಥಿಕ ಪರಸ್ಥಿತಿ ಸರಿ ಇಲ್ಲ ಕಳೆದ 5 ತಿಂಗಳುಗಳಿಂದ ಕೊರೋನಾ ಮಹಾಮಾರಿ ಎನ್ನುವ ವೈರಸ್ ಇಡಿ ಜಗತ್ತಿಗೆ ಮಹಾಮಾರಿಯಾಗಿ ಕಾಡುತ್ತಿರುವಾಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಿ ಗ್ರೂಪ್ ಸಿಬ್ಬಂದಿಗಳಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಮತ್ತು ಪ್ರೋತ್ಸಾಹ ಧನವನ್ನೂ ನೀಡಿಲ್ಲ.
ಕೋವಿಡ್ 19 ವಾರ್ಡಗಳಲ್ಲಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸಿದ ಹೊರ ಗುತ್ತಿಗೆ ಗ್ರೂಪ ಡಿ ಸಿಬ್ಬಂದಿಗಳಿಗೆ ಮಾಸಿಕ 10,000 ರೂಪಾಯಿ ಕೋವಿಡ್ ರಿಸ್ಕ್ ಪ್ರೋತ್ಸಾಹ ಧನವನ್ನೂ ನೀಡಲು ಆದೇಶವಾಗಿರುತ್ತದೆ. ಆದರೂ ನಮಗೆ ಇಲ್ಲಿವರೆಗೂ ಯಾವುದೇ ಪ್ರೋತ್ಸಾಹ ಧನ ಸಿಕ್ಕಿಲ್ಲ ಎಂದು ನೋವನ್ನು ಹೊರಹಾಕಿದರು. ನಮ್ಮ ಕುಟುಂಬವನ್ನು ಬಿಟ್ಟು ಹಗಲಿರುಳು ಕೆಲಸ ಮಾಡಿದ್ದೇವೆ ಕೋವಿಡ್ 19 ವಾರ್ಡನಲ್ಲಿ ಆದ್ದರಿಂದ ಸರಕಾರ ನಮಗೆ ಆದಷ್ಟು ಬೇಗನೆ ಎರಡು ದಿನಗಳೊಳಗಾಗಿ ಪ್ರೋತ್ಸಾಹ ಧನ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಮ್ಸ್ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.