ಸಂಕಲ್ಪ ವೃದ್ಧಾಶ್ರಮಕ್ಕೆ ದಾನ ನೀಡಿದ ಬೆಂಗಳೂರಿನ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ

  • 15 Jan 2024 , 12:16 AM
  • Belagavi
  • 147

ಯಮಕನಮರಡಿ : ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಮ್ ನಲ್ಲಿರುವ ಸಂಕಲ್ಪ ವೃದ್ಧಾಶ್ರಮಕ್ಕೆ ಇಂದು ಬೆಂಗಳೂರು ಮೂಲದ ಅನಿಲಕುಮಾರ ಅಂಗಡಿ ಅವರು ಬೇಟಿ ನೀಡಿದರು. ಬೆಂಗಳೂರಿನ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ(ರಿ) ಸಹಯೋಗದಲ್ಲಿ 5 ಗಾದಿ, 5 ಬೆಡ್‍ಶೀಟ್, 5 ತಲೆದಿಂಬುಗಳು ಹಾಗೂ ಹಾಗೂ 5 ಕರೋಗೆಟೆಡ್ ಕಾರ್ಟಗಳನ್ನು ದಾನವಾಗಿ ನೀಡಿದರು. ನಂತರ ಈ ಸಂಕಲ್ಪ ವೃದ್ಧಾಶ್ರಮ ಸಂಸ್ಥೆಯ ಮುಖ್ಯಸ್ಥರಾದ ಎ.ಬಿ.ಗುರಕ್ಕನವರ ಅವರು ಮಾತನಾಡಿ ಅನಿಲಕುಮಾರ ಅಂಗಡಿಯಂತಹ ದಾನಿಗಳಿಂದ ನಮ್ಮ ವೃಧ್ಧಾಶ್ರಮಕ್ಕೆ ಸಹಾಯವಾಗಿದ್ದು, ಬೆಂಗಳೂರಿನ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ(ರಿ) ಇವರಿಗೂ ವೃದ್ಧಾಶ್ರಮದ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ(ರಿ) ಇದರ ಆಜೀವ ಸದಸ್ಯರಾದ ಮಾಣಿಕ್ಯ ಕಳ್ಳಿಮನಿ ಸೇರಿದಂತೆ ಇತರರುಉಪಸ್ಥಿತರಿದ್ದರು.

Read All News