ಇಂದು ಹಿಂದು ಮಹಾ ಗಣಪತಿ ವಿಸರ್ಜನೆ

  • 18 Dec 2023 , 1:48 AM
  • Haveri
  • 162

ಬಂಕಾಪುರ: ಪಟ್ಟಣದ ನೆಹರು ಗಾರ್ಡನ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯು ಇಂದು ರವಿವಾರ ನಡೆಯಲಿರುವ ಹಿನ್ನೆಲೆಯಲ್ಲಿ ಪೊಲೀಸ್‍ರು ಬಾರಿ ಬಂದೋಬಸ್ತ ಒದಗಿಸಿದ್ದಾರೆ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲಿ ಸಿ.ಸಿ.ಕ್ಯಾಮರಾ, ದೂರದೃಷ್ಠಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಪಟ್ಟಣದ ಆಯಾಕಟ್ಟಿನ ಪ್ರದೇಶದಲ್ಲಿ ಮುಂಜಾಗ್ರತೆ ಕ್ರಮವಾಗಿ 20ಕ್ಕೂ ಅಧಿಕ ಸಿ.ಸಿ.ಕ್ಯಾಮಾರಗಳ ಕಣ್ಗಾವಲನ್ನು ಇರಿಸಲಾಗಿದೆ. 4 ಡಿ.ಎಸ್.ಪಿ. 13 ಸಿ.ಪಿ.ಐ. 25 ಪಿ.ಎಸ್.ಐ. 170 ಸಿವಿಲ್ ಪೊಲೀಸ್, 5 ಡಿ.ಆರ್. ತುಕಡಿಗಳು, ಇಂಟರ್ ಸೆಪ್ಟರ್ ವಾಹನ, ಪೆಟ್ರೋಲಿಯಂ ವಾಹನ ಸೇರಿದಂತೆ ದೂರದೃಷ್ಠಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ವಿವಿದೆಡೆಗಳಿಂದ ಪಟ್ಟಣದ ಒಳಗೆ ಪ್ರವೇಸಿಸದಂತೆ ಸವಣೂರ ಕ್ರಾಸ್, ಮುಂಡಗೋಡ ಕ್ರಾಸ್, ಹಾವೇರಿ ರಸ್ತೆಗೆ ನಾಕಾಬಂದಿ ಮಾಡಲಾಗಿದೆ. ಸಾರ್ವಜನಿಕರನ್ನು ಪಟ್ಟಣದ ಒಳಗೆ ಪ್ರವೇಸಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Read All News