ಬಿಜೆಪಿಯಲ್ಲಿ ಗೊಂದಲ,ಭಿನ್ನಮತ ಇದೆ ಎನ್ನುವುದು ಎಲ್ಲಾ ಸುಳ್ಳು: ಡಾ. ಪ್ರಭಾಕರ್ ಕೋರೆ
- 14 Jan 2024 , 10:01 PM
- Belagavi
- 90
ಬೆಳಗಾವಿ: ಸದ್ಯಕ್ಕೆ ರಾಜ್ಯದಲ್ಲಿ ಸುದ್ದಿ ಇರುವದು ಎಂದರೆ ಬಿಜೆಪಿಯಲ್ಲಿ ಭಿನ್ನಮತ ವಾಗಿದೆ ಎಂಬ ಊಹಾ ಪೋಹಗಳಿಗೆ ಇಂದು ತೆರೆ ಬಿದ್ದಿದೆ ಬಿಜೆಪಿಯಲ್ಲಿ ಯಾವ ಗದ್ದಲವು ಇಲ್ಲಾ ಇಂದು ಒಂದು ದೊಡ್ಡ ಪಕ್ಷವಾಗಿದ್ದರಿಂದ ಯಾವುದೇ ಚುನಾವಣೆ ನಡೆದರು ಟಿಕೆಟ್ ಗಾಗಿ ಆಕಾಂಕ್ಷಿಳಿರುವದು ಸಹಜ ಟಿಕೆಟ್ ವಿಷಯದಲ್ಲಿ ಮುಕ್ತವಾಗಿ ನಿರ್ಣಯ ಕೈಗೊಳ್ಳುತ್ತೆನೆ. ಸುದ್ದಿಗಾರರೊಂದಿಗೆ ಮಾತಾಡಿದ ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ. ಟಿಕೆಟ್ ಕೇಳುವದು ತಪ್ಪಲ್ಲ,ಅಷ್ಟಕ್ಕೂ ಇನ್ನೂ ರಾಜ್ಯಸಭೆ ಚುನಾವಣೆಗೆ ನೋಟಿಫಿಕೇಶನ್ ಕೂಡ ಜಾರಿಗೊಂಡಿಲ್ಲ ಉಮೇಶ್ ಕತ್ತಿ ಅವರು ಶಾಸಕ ಮಿತ್ರರನ್ನು ಊಟಕ್ಕೆ ಕರೆದಿದ್ದರು ಅದು ಭಿನ್ನಮತವಲ್ಲ ಚಿಕ್ಕೋಡಿ ಲೋಕಸಭಾ ಚುನಾವಣೆ ನಡೆದಾಗ ನಾನು ಸಹ ಟಿಕೆಟ್ ಕೇಳಿದೆ ಈಗ ರಾಜ್ಯ ಸಭಾ ಟಿಕೆಟ್ ಅನ್ನು ರಮೇಶ ಕತ್ತಿ ಕೇಳುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ ಬಿಜೆಪಿಯಲ್ಲಿ ಗೊಂದಲ ಇದೆ,ಭಿನ್ನಮತ ಏರ್ಪಟ್ಟಿದೆ ಎನ್ನುವುದು ಎಲ್ಲಾ ಸುಳ್ಳು ಮುಖ್ಯಮಂತ್ರಿ ಯಡಿಯೂರಪ್ಪ ಅವಧಿ ಪೂರ್ಣಗೊಳಿಸುವುದು ಖಚಿತ ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಹೇಳಿಕೆ ನೀಡಿದ್ದಾರೆ.