ರಾಣೇಬೆನ್ನೂರ: ತಾಲೂಕಿನ ಗುಡ್ಡದ ಆನ್ವೇರಿಯ 10ನೇ ಶತಮಾನದ ಕಲ್ಮೇಶ್ವರ ದೇವಸ್ಥಾನದ ಸ್ವಚ್ಛತಾ ಕಾರ್ಯವನ್ನು ರವಿವಾರ ಸ್ಥಳೀಯ ಯುವ ಬ್ರೀಗೇಡ್ ತಂಡದ ಸದಸ್ಯರು ಗ್ರಾಮಸ್ಥರ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯ ನೇರವೇರಿಸಿದರು. ಈ ವೇಳೆ ತಾಲೂಕಾ ಯುವ ಬ್ರೀಗೇಡ್ ಸಂಚಾಲಕ ಪ್ರವೀಣ್ ಶ್ರೀಸಾಗರ ಮಾತನಾಡಿ ಇದು ಪುರಾತನ ದೇವಾಲಯವಾಗಿದ್ದು, ಇದರ ಜೀರ್ಣೋದ್ಧಾರ ಕಾರ್ಯ ಆಗಬೇಕಾಗಿದೆ. ತಾಲೂಕಿನ ಎಲ್ಲಾ ಪುರಾತನ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗುವುದು. ಜನರಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ದೇವಾಲಯಗಳ ಅವಶ್ಯವಿದ್ದು ಜನರು ಮನಶಾಂತಿಗೆ ಇಲ್ಲಿಗೆ ಬರುವುದು ಸಹಜ ಅವು ಸುಂದರವಾಗಿಬೇಕು. ಈ ದಿಶೆಯಲ್ಲಿ ಎಲ್ಲರೂ ಶ್ರಮಿಸೋಣ ಎಂದು ಸದಸ್ಯರಿಗೆ ಕರೆ ಕೊಟ್ಟರು. ಈ ಸಂದರ್ಭದಲ್ಲಿ ಸದಸ್ಯರಾದ ಗೌಡ ಶಿವಣ್ಣನವರ, ಬಸವರಾಜ ರಾಜನಹಳ್ಳಿ, ನಿಂಗರಾಜ ಹಾವನೂರ, ವಿವೇಕ ಚಿತ್ತರಗಿ, ಶಿವು, ಗ್ರಾಪಂ ಅಧ್ಯಕ್ಷ ಮಹೇಶಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.