ಬೆಳಗಾವಿ: ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ ರೈಲು ನಿಲ್ದಾಣಕ್ಕೆ ಮಲ್ಲಮ್ಮ , ಬಸ್ ನಿಲ್ದಾಣಕ್ಕೆ ರಾಯಣ್ಣನ ಹೆಸರಿಡಲು ಮುಖ್ಯಮಂತ್ರಿಗಳಿಗೆ ಕನ್ನಡ ಸಂಘಟನೆಗಳ ಆಗ್ರಹ . ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ರೈಲು ನಿಲ್ದಾಣಕ್ಕೆ ಬೆಳವಡಿಯ ರಾಣಿ ಮಲ್ಲಮ್ಮ ಹಾಗೂ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿಡಲು ಆಗ್ರಹಿಸಿ ವಿವಿಧ ಕನ್ನಡ ಸಂಘಟನೆಗಳು ಇಂದು ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದವು . ಕೋಟೆಯ ಕೆರೆಯ ಮಧ್ಯೆ ರಾಮಾಯಣದ ಆದಿಕವಿ ವಾಲ್ಮೀಕಿ ಮಹರ್ಷಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಹಾಗೂ ವೀರ ಸಿಂಧೂರು ಲಕ್ಷ್ಮಣನ ಹೆಸರನ್ನು ಬೆಳಗಾವಿಯ ಪ್ರಮುಖ ರಸ್ತೆಯೊಂದಕ್ಕೆ ಇಡಬೇಕೆಂದೂ ಸಹ ಮನವಿಯಲ್ಲಿ ಆಗ್ರಹಿಸಲಾಗಿದೆ . ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ , ದೀಪಕ ಗುಡಗನಟ್ಟಿ , ಸಾಗರ್ ಬೋರಗಲ್ಲ , ಸುರೇಶ ಗವನ್ನವರ , ಬಾಳು ಜಡಗಿ , ಗಣೇಶ ರೋಖಡೆ , ವಿರೇಂದ್ರ ಗೋಬರಿ , ಸಿನೇ ಕಲಾವಿದ ಅಭಿಲಾಷ್ , ಕಿರಣ ಅನಗೋಳಣಿತಿನ್ ಮುಖರಿ , ಬೆಳವಡಿಯ ಹಿರಿಯರು ಹಾಗೂ ನ್ಯಾಯವಾದಿ ಸಿದ್ದಗೌಡ ಮುಂತಾದವರು ಜಿಲ್ಲಾಧಿಕಾರಿ ಮಹೇಶ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು .