ಅಶೋಕ ಗಸ್ತಿ ನಿಧನ ಬಿಜೆಪಿಗೆ ಅಷ್ಟೇ ಅಲ್ಲದೆ ಇಡಿ ನಾಡಿಗೆ ತುಂಬಲಾರದ ನಷ್ಟವಾಗಿದೆ; ಸಂಜಯ ಪಾಟೀಲ್

  • 15 Jan 2024 , 1:48 AM
  • Belagavi
  • 120
<p>
<strong>ಬೆಳಗಾವಿ:</strong> ರಾಜ್ಯಸಭಾ ಸದಸ್ಯ ಅಶೋಕ ಗಸ್ತಿಯವರ ಅಕಾಲಿಕ ನಿಧನದಿಂದ ಅವರ ಆತ್ಮಕ್ಕೆ ಶಾಂತಿಕೊರಿ ಬೆಳಗಾವಿ ಗ್ರಾಮಿಣ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಸಾಮಾನ್ಯ ಕಾರ್ಯಕರ್ತರಾಗಿ ಅವರು ಭಾರತೀಯ ಜನತಾ ಪಕ್ಷಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರದ ನಾಯಕರ ಗಮನ ಸೆಳೆದು ರಾಷ್ಟ್ರ ಮಟ್ಟದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಬಿಜೆಪಿಯಲ್ಲು ಸ್ಥಾನಮಾನವಿದೆ ಎಂದು ದೇಶಕ್ಕೆ ಉದಾಹರಣೆಯಾಗಿದ್ದ ಅಶೋಕ ಗಸ್ತಿ ಪಕ್ಷದ ಹಿರಿಯ ಮಾರ್ಗದರ್ಶಕರಾಗಿದ್ದರು ಇತಿಚಿಗಷ್ಟೇ ರಾಜ್ಯದಿಂದ ನೂತನವಾಗಿ ರಾಜ್ಯಸಭೆಗೆ ಆಯ್ಕೆ ಆಗಿದ್ದ ಅಶೋಕ ಗಸ್ತಿ ಅವರು ಕೋರೊನಾ ರೋಗಕ್ಕೆ ತುತ್ತಾಗಿರುವದು ಪಕ್ಷಕ್ಕೆ ಅಷ್ಟೇ ಅಲ್ಲದೆ ಇಡಿ ನಾಡಿಗೆ ತುಂಬಲಾರದ ನಷ್ಟವಾಗಿದೆ ಆದ್ದರಿಂದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಶ್ರದ್ಧಾಂಜಲಿ ಅರ್ಪಿಸಿದರು.
</p>

Read All News