ನರೇಂದ್ರ ಮೋದಿ ದೇಶ ಕಂಡ ಅಪರೂಪದ ನಾಯಕ;ಶಾಸಕ ವಿರೂಪಾಕ್ಷಪ್ಪ

  • 14 Jan 2024 , 10:47 PM
  • Haveri
  • 200

ಬ್ಯಾಡಗಿ: ಪ್ರಧಾನಿ ನರೇಂದ್ರ ಮೋದಿ ದೇಶ ಕಂಡ ಅಪರೂಪದ ನಾಯಕರಾಗಿದ್ದು, ಭಾರತದ ಸ್ಥಾನಮಾನ ವಿಶ್ವಮಟ್ಟದಲ್ಲಿ ಹೆಚ್ಚಿಸುವಲ್ಲಿ ಅವರ ಪಾತ್ರ ಹಿರಿದಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು. ಪಟ್ಟಣದ ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬದ ಪ್ರಯುಕ್ತ 70 ಸಸಿಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಹಿಂದಿನ ಐದು ವರ್ಷಗಳ ಕಾಲ ಭ್ರಷ್ಟಾಚಾರಹಿತ ಹಾಗೂ ಕಪ್ಪುಚುಕ್ಕೆಯಿಲ್ಲದೆ ಆಡಳಿತದಿಂದ ಎರಡನೇ ಅವಧಿಗೆ ದೇಶದ ಪ್ರಜೆಗಳು ಆಯ್ಕೆಗೊಳಿಸುವ ಮೂಲಕ ಮೋದಿಯವರ ಜನಪರ ಆಢಳಿತ ಮೆಚ್ಚುಗೆ ಗಳಿಸಿತು. ದೇಶದ ಭವಿಷ್ಯ, ದೂರದೃಷ್ಟಿ ಯೋಜನೆಗಳು, ಬಡವರ ಕಾಳಜಿ ಇನ್ನಷ್ಟು ಎತ್ತರಕ್ಕೆ ಒಯ್ದಿದೆ. ಎಂದಿಗೂ ಅವರು ತಮ್ಮ ಕುಟುಂಬ ಹಾಗೂ ಸ್ವಾರ್ಥಕ್ಕಾಗಿ ದೇಶವನ್ನು ಬಲಿಕೊಟ್ಟಿಲ್ಲ, ಜನರಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ದೇಶದಲ್ಲಿ ಕರೋನಾದಂತ ರೋಗ ಉಲ್ಭಣ, ಚೀನಾ ಸೇರಿದಂತೆ ಹಲವು ರಾಜತಾಂತ್ರಿಕ ಸಮಸ್ಯೆಗಳು ಉದ್ಭವಿಸಿದಾಗಲೂ ದೃತಿಗೆಡದೆ, ದೇಶವನ್ನು ಮುನ್ನೆಡೆಸುತ್ತಿರುವ ಮಹಾಮೇಧಾವಿ ಎಂದು ಗುಣಗಾನ ಮಾಡಿದರು. ಆರ್ಥಿಕವಾಗಿ ದೇಶವನ್ನು ಹಾಳು ಮಾಡುತ್ತಿದ್ದ, ನಕಲಿ ನೋಟುಗಳ ಹಾವಳಿ ತಡೆಗಟ್ಟಲು ನೋಟ್ ಬ್ಯಾನ್ ಮಾಡುವ ಮೂಲಕ ದೇಶವನ್ನು ಆರ್ಥಿಕ ಸಬಲಕ್ಕೆ ಕಾರಣರಾದರು. ಆಗ ವಿಪಕ್ಷಗಳು ಇಲ್ಲಸಲ್ಲದ ಟೀಕೆ ಟಿಪ್ಪನಿಗಳಿಂದ ಜನರ ದಿಕ್ಕು ತಪ್ಪಿಸಲು ಯತ್ನಿಸಿದವು. ಈಗ ತೆರಿಗೆ ಪದ್ದತಿ ಸುಸೂತ್ರವಾಗಿ ನಡೆಯುತ್ತಿರುವುದು ಇದಕ್ಕೆ ಪ್ರಮುಖವಾಗಿದೆ. ರಾಜ್ಯದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ಆಢಳಿತ ನೀಡುತ್ತಿದ್ದಾರೆ ಎಂದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಶಾಸಕರು, ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಮಾಹಿತಿ ಪಡೆದರು. ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕೋವಿಡ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ 50 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಿ. ಇದಕ್ಕಾಗಿ ಎಲ್ಲ ನೆರವು ನೀಡಲಾಗುವುದು. ಯಾವುದೇ ಕಾರಣಕ್ಕೂ ರೋಗಿಗಳು ಚಿಕಿತ್ಸೆ ವಂಚಿತರಾಗಬಾರದು. ಸರ್ಕಾರ ಎಲ್ಲ ನೆರವು ಒದಗಿಸುತ್ತಿದ್ದು, ವೈದ್ಯ, ಸಿಬ್ಬಂದಿಗಳು ಗುಣಮಟ್ಟದ ಚಿಕಿತ್ಸೆ ನೀಡಿ, ಗುಣಮುಖರಾಗಲು ಅನುಕೂಲ ಕಲ್ಪಿಸಿ ಎಂದರು. ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಶೆಟ್ಟರ, ತಾಲೂಕಾಧ್ಯಕ್ಷ ಸುರೇಶ ಆಸಾದಿ, ಶಿವಯೋಗಿ ಶಿರೂರು, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶಿವಯೋಗಿ ಗಡಾದ, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ವೀರೇಶ ಅಂಗಡಿ, ವಿಷ್ಣುಕಾಂತ ಬೆನ್ನೂರು, ವಿನಯಕುಮಾರ ಹಿರೇಮಠ, ಸಂಜೀವ ಮಡಿವಾಳರ ಇತರರು ಉಪಸ್ಥಿತರಿದ್ದರು.

Read All News