ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ಮುಖಂಡರಾಗಿಯು ಕಾರ್ಯ ನಿರ್ವಹಿಸಿದ್ದ ಆನಂದ ಚೋಪ್ರಾ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಅವರು ವೃದ್ಧ ತಾಯಿ, ಪತ್ನಿ , ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸವತ್ತಿಯ ವಿಧಾನ ಸಭಾ ಕ್ಷೇತ್ರಕ್ಕೆ ಹಲವು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಇವರು ಕಳೆದ ಬಾರಿ ಅತೀ ಕಡಿಮೆ ಮತ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇವರ ನಿಧನದ ಸುದ್ದಿಯಿಂದ ಅಭಿಮಾನಿ ಬಳಗದವರು ಕಂಬನಿ ಮಿಡಿದ್ದಾರೆ.