ಬ್ಯಾಡಗಿ: ತಾಲೂಕು ಮುದ್ರಣಕಾರರ ಸಂಘದ ನೂತನ ಅಧ್ಯಕ್ಷರಾಗಿ ಗಿರೀಶ ಇಂಡಿಮಠ ಹಾಗೂ ಉಪಾಧ್ಯಕ್ಷರಾಗಿ ಚೇತನ ಹುಬ್ಬಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಬಸವೇಶ್ವರ ನಗರದ ಮುದ್ರಣಕಾರರ ಸಂಘದ ಕಾರ್ಯಾಲಯದಲ್ಲಿ ಸಭೆ ನಡೆಸಿದ ಬಳಿಕ 2020-21ನೇ ಸಾಲಿನ ಅಧ್ಯಕ್ಷರಾಗಿ ಗಿರೀಶ ಇಂಡಿಮಠ ಹಾಗೂ ಉಪಾಧ್ಯಕ್ಷರಾಗಿ ಚೇತನ ಹುಬ್ಬಳ್ಳಿ ಹಾಗೂ ಕಾರ್ಯದರ್ಶಿಯಾಗಿ ಉದಯ ಚೌದರಿ ಆಯ್ಕೆಯಾದರೆ ನಿರ್ದೇಶಕರಾಗಿ ಕರಬಸಪ್ಪ ಮರಿಗೌಡ್ರ, ಲೋಹಿತ ಹೆಡಿಯಾಲ, ಚನ್ನಬಸಪ್ಪ ಬನ್ನಿಹಟ್ಟಿ, ಸುಭಾಸ ಪಾಟೀಲ, ಸುಮಾ ಹಾದೀಮನಿ ನೂತನವಾಗಿ ಆಯ್ಕೆ ಆಗಿದ್ದಾರೆ.