ರಾಣೇಬೆನ್ನೂರ: ತಾಲೂಕಿನ ದೇವರಗುಡ್ಡ ಗ್ರಾಮದ ದ್ಯಾಮಪ್ಪ ಡೊಳ್ಳಿನ ಎಂಬುವವರ ಮನೆ ಕಳೆದ ಕೆಲದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಕುಸಿದ ಕಾರಣ ಪುನಃ ಮನೆ ನಿರ್ಮಾಣದ ಕಟ್ಟಡ ಸಾಮಗ್ರಿಗಳಾಗಿ ಶ್ರೀ ಮಾಲತೇಶ ಮಂದಿರದ ಪ್ರಧಾನ ಆರ್ಚಕ ಸಂತೋಷಭಟ್ಟ ಪೂಜಾರ 25 ಸಾವಿರ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷಭಟ್ಟ ಪೂಜಾರ ಇತ್ತೀಚಿಗೆ ಸುರಿದ ಬಾರೀ ಮಳೆಯಿಂದ ಡೋಳ್ಳಿನ ಅವರ ಮನೆ ಕುಸಿದು ಬಿದ್ದಿದು. ಅವರು ಪುನಃ ಮನೆ ನಿರ್ಮಿಸಲು ಸಾಕಷ್ಟು ಕಷ್ಟಪಡುತ್ತಿದ್ದನ್ನು ಮನಗಂಡು ಅವರ ಕಷ್ಟಕ್ಕೆ ಸ್ವಲ್ಪವಾದರೂ ನೆರವಾಗುವ ದೃಷ್ಠಿಯಿಂದ ತಮ್ಮ ಕೈಲಾದ ಧನಸಹಾಯವನ್ನು ಮಾಡಿದ್ದೇವೆ. ಇನ್ನೂ ಸಂಪೂರ್ಣ ಮನೆ ನಿರ್ಮಾಣಕ್ಕೆ ಸರ್ಕಾರ ಕೂಡ ನೆರವು ನೀಡಿದರೆ ಸಂಕಷ್ಟದಲ್ಲಿರುವ ದಂಪತಿಗಳಿಗೆ ಸಹಾಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಭಂಡಾರದ ಗುರುಗಳಾದ ಮಲ್ಲಪ್ಪಯ್ಯ ಒಡೆಯರ, ಉದಯಕುಮಾರ ವರಗಿರಿ, ನಿಂಗಪ್ಪ ಮುದ್ದಿ, ಹನುಮಂತಪ್ಪ ನಾಯರ, ಫಕ್ಕೀರಪ್ಪ ಐಗಳ, ದೇವಪ್ಪ ವಾಸರದ, ನ್ಯಾಯಾವಾದಿ ನಾಗರಾಜ ಸಂಶಿ, ನಿಂಗಪ್ಪ ದ್ಯಾವಣ್ಣವರ, ಪ್ರಕಾಶ ಬಳ್ಳಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.