ಬೆಳಗಾವಿ: ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಬೆಳಗಾವಿಯ ಸುವರ್ಣ ವಿಧಾನ ಸೌಧದ ಮುಂದೆ ಮಲಗಿ ಪ್ರತಿಭಟನೆ ನಡೆಸಿದ್ದ ಅವರು ಯಡಿಯೂರಪ್ಪ ಸರ್ವಾಧಿಕಾರಿ ಸಿಎಂ ಆಗಿದ್ದಾರೆ ನಾನು ಸಾಕಷ್ಟು ಸಿಎಂ ಅವರನ್ನ ನೋಡಿದ್ದೇನೆ. ಬಿಎಸ್ವೈ ಪಕ್ಷಾಂತರದ ಪ್ರಭು, ಭ್ರಷ್ಟಾಚಾರ ಹಾಗೂ ಸಾಕಷ್ಟು ಲೂಟಿ ಮಾಡುತ್ತಿದ್ದಾರೆ. ದ್ವೇಷ ಅಸೂಯೆ ಅವರಲ್ಲಿದೆ ಇಂತಹ ಸಿಎಂ ಕೈಯಲ್ಲಿ ನಮ್ಮ ರಾಜ್ಯ ಸಿಕ್ಕಿದೆ ಸಂಪುಟದ ಯಾವ ಡಿಸಿಎಂ, ಸಚಿವರು, ಶಾಸಕರಿಗೆ ಯಡಿಯೂರಪ್ಪ ಅವರನ್ನ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ನಾನು ಶಾಸನಸಭೆಗೆ ಬರದಂತೆ ಬಿಎಸವೈ ಮಾಡುತ್ತಿದ್ದಾರೆ ಒಂದು ವೇಳೆ ನಾನು ಶಾಸನಸಭೆಗೆ ಬಂದ್ರೆ ಯಡಿಯೂರಪ್ಪ ಅವರ ಚಡ್ಡಿ ಕಳಿಸುತ್ತಿದ್ದೆ ಎಂದು ಯಡಿಯೂರಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಾಗರಾಜರು. ನನ್ನ ಹೋರಾಟಕ್ಕೆ ಸರ್ಕಾರ ಅಡ್ಡಿ ಪಡಿಸುತ್ತಿದೆ. ಯಡಿಯೂರಪ್ಪ ಸರ್ಕಾರ ತಕ್ಷಣವೇ ಬೆಳಗಾವಿ ಸುವರ್ಣ ಸೌಧದಲ್ಲಿ 15 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಇಲ್ಲಿ ಅಧಿವೇಶನ ನಡೆಸುವ ಮೂಲಕ ಶಿವಸೇನೆ, ಎಂಇಎಸಗೆ ತಕ್ಕ ಪಾಠ ಕಲಿಸಬೇಕು.
ಪ್ರವಾಹದಿಂದ ತತ್ತರಿಸಿದ ಜನರಿಗೆ ಸ್ಪಂದಿಸಬೇಕು ಇಲ್ಲಿಯ ಉತ್ತರ ಕರ್ನಾಟಕ ಶಾಸಕರು, ಬೆಳಗಾವಿ ಜಿಲ್ಲೆ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.