ಅಂಬೇಡ್ಕರ ಜೀವನ ಚರಿತ್ರೆ ತಿಳಿದುಕೊಳ್ಳಲು ಕರೆ : ಮಾಜಿ ಸಚಿವ ಶಶಿಕಾಂತ ನಾಯಿಕ

  • 15 Jan 2024 , 5:03 AM
  • Belagavi
  • 177

ಹುಕ್ಕೇರಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ ಅವರ ಜೀವನ ಚರಿತ್ರೆ ಕುರಿತು ಝೀ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಯಿಯನ್ನು ಪ್ರತಿಯೊಬ್ಬರು ನೋಡಿ ಅದರಲ್ಲಿರುವ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.ತಾಲೂಕಿನ ಹೊಸೂರ ಗ್ರಾಮದಲ್ಲಿ ಇಂದು ಝೀ ಟಿ.ವಿ ಯಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ ಅವರ ಜೀವನಾಧಾರಿತ ಕಥೆ ಧಾರಾವಾಹಿಯ ಭಾವಚಿತ್ರವನ್ನು ಅನಾವರಣ ಮಾಡಿ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು ಹಾಗೂ ಸ್ವಾತಂತ್ರ್ಯದ ಹಕ್ಕನ್ನು ತಂದು ಕೊಟ್ಟ ಅಂಬೇಡ್ಕರ ಅವರ ಬದುಕು ನಮಗೆಲ್ಲಾ ಆದರ್ಶಪ್ರಾಯವಾಗಲಿ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎನ್. ಆರ್.ಲಾತೂರ ಅವರು ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣ ಪಡೆಬೇಕೆಂಬ ಅಂಬೇಡ್ಕರ ಅವರ ಕನಸು ನನಸಾಗುವಂತೆ ಮಾಡುವುದೇ ನಮ್ಮ ಕರ್ತವ್ಯವಾಗಬೇಕು ಎಂದರು.
ಸಮಾರಂಭದಲ್ಲಿ ಕಲ್ಲಪ್ಪಾ ಕಟ್ಟಿ, ಶಂಕರ ಬಾಬು ಘಂಟಿ, ಕೆ. ವೆಂಕಟೇಶ, ಸುಂದರ ಶಿಂಗೆ, ಬಸವರಾಜ ಕಟ್ಟಿ, ರಮೇಶ ಕಾಂಬಳೆ, ಶೀತಲ ಕಟ್ಟಿ, ನಿಂಗಪ್ಪಾ ಘಂಟಿ, ರಾಜು ಮುತ್ತಾ, ವಿಶ್ವನಾಥ ಕಟ್ಟಿ, ಬಾಬು ಶಿಂಘೆ, ಬಸವರಾಜ ಮಾರುತಿ ಹರಿಜನ, ವಿಷ್ಣು ಫಕೀರಪ್ಪಾ ಹೊಸೂರ, ಬಾಳಪ್ಪಾ ಹರಿಜನ, ಪಾಂಡು ಲಗಮಪ್ಪಾ ಹರಿಜನ, ರಾಹುಲ ಕೆಂಪಣ್ಣಾ ಹರಿಜನ, ಭೀಮಾ ಚಿಕ್ಕೋಡಿ ಮತ್ತು ಡಾ: ಬಿ ಆರ್ ಅಂಬೇಡ್ಕರ ಅಭಿಮಾನಿ ಬಳಗದ ಸರ್ವ ಸದಸ್ಯರು, ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.

Read All News