ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ಉತ್ಸವದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಕಿಟ್ ವಿವಾದಕ್ಕೆ ಕಾರಣವಾಗಿದೆ. ವಿವಾದಾತ್ಮಕ ಸ್ಕಿಟ್ ಬಿಆರ್ ಅಂಬೇಡ್ಕರ್ ಮತ್ತು ಮೀಸಲಾತಿ ಸೇರಿದಂತೆ ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ.
ಕಾಲೇಜಿನ ಸ್ಕಿಟ್‌ನ ವಿಡಿಯೋ ವೈರಲ್ ಆಗಿದ್ದು ದಲಿತ ಗುಂಪುಗಳು "ಮ್ಯಾಡ್ ಆಡ್ಸ್" ಸ್ಪರ್ಧೆಯ ಸಂದರ್ಭದಲ್ಲಿ ಆಕ್ಷೇಪಾರ್ಹ ಕೃತ್ಯವನ್ನು ಖಂಡಿಸಿವೆ ಮತ್ತು ಇದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಿವೆ.
ಸ್ಕಿಟ್‌ನಲ್ಲಿ ವಿದ್ಯಾರ್ಥಿಗಳು ದಲಿತರು ಮತ್ತು ಪರಿಶಿಷ್ಟ ಜಾತಿಯ ಬಗ್ಗೆ ವಿವಿಧ ಹಾಸ್ಯಗಳನ್ನು ಬಳಿಸಿದ್ದಾರೆ ಮತ್ತು ಬಾಬಾಸಾಹೇಬ ಅಂಬೆಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ.
Shame that an education institute promotes such a casteist event. These students must be booked under SC/ST act to teach a lesson.
— @UrbanShrink (@UrbanShrink) February 10, 2023
pic.twitter.com/tVpZHSnHbu
ಎಚ್ಚೆತ್ತು ಕೊಂಡ ವಿಶ್ವವಿದ್ಯಾನಿಲಯವು ಆರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ ಮತ್ತು ಶಿಸ್ತು ಕ್ರಮವನ್ನು ತೆಗೆದುಕೊಂಡಿದೆ ಎಂದು ತಿಳಿಸಿದೆ.