ಕಿತ್ತೂರು ರಾಣಿ ಚೆನ್ನಮ್ಮ ಮೂರ್ತಿ ಸ್ಥಾಪಿಸಲು ಇದ್ದ ತಡೆಯಾಜ್ಞೆ ತೆರವು; ಬೊಮ್ಮಾಯಿ
- 15 Jan 2024 , 2:48 AM
- Haveri
- 103
<p>
<strong>ಶಿಗ್ಗಾಂವಿ</strong>: ನಗರದಲ್ಲಿ ಕಿತ್ತೂರು ರಾಣೆ ಚೆನ್ನಮ್ಮ ಮೂರ್ತಿಯನ್ನು ಸ್ಥಾಪಿಸಲು ಇದ್ದ ತಡೆಯಾಜ್ಞೆಯನ್ನು ಧಾರವಾಡ ಪೀಠದ ಉಚ್ಛನ್ಯಾಯಾಲಯ ತೆರವುಗೊಳಿಸಿದ್ದು, ಮೂರ್ತಿ ಸ್ಥಾಪನೆಗೆ ದಾರಿ ಸುಗಮವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಈ ಬಗ್ಗೆ ಈಗಾಗಲೇ ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಧಾರವಾಡ ಪೀಠದ ಉಚ್ಛನ್ಯಾಯಾಲಯದ ಆದೇಶ ತಲುಪಿದ ತಕ್ಷಣ ಶಿಗ್ಗಾಂವಿ ನಗರದಲ್ಲಿ ಮೂರ್ತಿ ಸ್ಥಾಪಿಸಲು ಅನುಮತಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದೇನೆ. ಈಗಾಗಲೇ ಕಿತ್ತೂರು ರಾಣೆ ಚೆನ್ನಮ್ಮ ಮೂರ್ತಿಯು ಪೂರ್ಣಗೊಂಡಿದ್ದು, ಶಿಗ್ಗಾಂವಿ ನಗರದ ಹೊರ ವಲಯದಲ್ಲಿ ಇಡಲಾಗಿದ್ದು ಅನುಮತಿ ಆದೇಶ ಬಂದ ತಕ್ಷಣ ನಗರದಲ್ಲಿ ಕಿತ್ತೂರು ರಾಣೆ ಚೆನ್ನಮ್ಮ ಮೂರ್ತಿ ಸ್ಥಾಪನೆಗೆ ಕೂಡಲೇ ಎಲ್ಲಾ ಕ್ರಮ ಜರುಗಿಸಲಾಗುವುದು. ಕಿತ್ತೂರು ರಾಣಿ ಚೆನ್ನಮ್ಮ ಒಬ್ಬ ವೀರ ಸ್ವತಂತ್ರ್ಯ ಸೇನಾನಿ ಮಹಿಳೆಯಾಗಿದ್ದು, ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾಳೆ. ಅವಳ ಹೋರಾಟ ತ್ಯಾಗ ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ. ಆದ್ದರಿಂದ, ಎಲ್ಲಾ ಜನ ಸಮೂಹ ಒಟ್ಟಾಗಿ ಇದರಲ್ಲಿ ಪಾಲ್ಗೋಳಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.
</p>