ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಉತ್ಸವವನ್ನು ಅತಿ ಸರಳವಾಗಿ ಸಂಭ್ರಮದಿಂದ ಮಾಡುವುದಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.
ಅರಮನೆ ಆಡಳಿತ ಮಂಡಳಿ ಈ ಬಗ್ಗೆ ತೀರ್ಮಾಣ ಕೈಗೊಂಡಿದ್ದು ಅರಮನೆ ಅಂಗಳದಲ್ಲಿ ಮಾತ್ರ ಉತ್ಸವ ನಡೆಯಲಿದೆ.
ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಐದು ಆನೆಗಳ ವಾಕಿಂಗ್ ಹಾಗೂ ತಾಲೀಮಿಗೆ ಅರಮನೆಯ ಅಂಗಳ ಕಾಂಕ್ರೀಟ್ ರಸ್ತೆಯಿಂದ ತಯಾರಾಗುತ್ತಿದೆ.
ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳುತ್ತಿದೆ.