ಹಳ್ಳಿ ಹಳ್ಳಿಗಳಿಗು ಹರಡಿದ ಕೋರೊನಾ
- 15 Jan 2024 , 3:06 AM
- Belagavi
- 107
ಬೆಳಗಾವಿ: ಇಡೀ ದೇಶದಲ್ಲಿ ಕೋರೊನಾ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ರಾಜ್ಯದ ಜನತೆ ಕೂಡ ತತ್ತರಿಸಿ ಹೋಗಿದ್ದು, ಇಂದು ಒಂದೆ ದಿನ 388 ಕೋರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ . ಅದರಲ್ಲು ಗಡಿ ಜಿಲ್ಲೆ ಬೆಳಗಾವಿಗೆ ಮಹಾರಾಷ್ಟ್ರ ನಂಜು ಬಿಟ್ಟಿಲ್ಲಾ ಇಂದು ಜಿಲ್ಲೆಯಲ್ಲಿ ಒಂದೇ ದಿನಾ 51 ಹೊಸ ಪ್ರಕರಣ ದಾಖಲಾಗಿದ್ದು ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 211 ಕ್ಕೆ ಏರಿಕೆ ಯಾಗಿದೆ . ಬೆಳಗಾವಿಯ ಹಳ್ಳಿಗಳಿಗೂ ಹರಡಿದ ಕೋರೊನಾ ಹೆಚ್ಚಿ ಯಮಕನಮರಡಿ ಹಾಗೂ ಬೆಳಗಾವಿ ತಾಲೂಕಿನಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ ಇನ್ನೂ ಹಲವಾರು ಜನ ಕೊರೋನಾ ಸೋಂಕಿತರ ಜೊತೆ ನೇರ ಸಂಪರ್ಕ ಹೊಂದಿದ್ದರು. ಎಂದು ತಿಳಿದುಬಂದಿದೆ. ಕೊರೋನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಆದಾಗ್ಯೂ, ಈ ವೈರಸ್ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ.