ರಾಜ್ಯದ ರೈಲು ಮಂತ್ರಿ ದೇಶ ಕಂಡ ಪ್ರಮುಖ ರಾಜಕಾರಣಿ ಸದಾ ಸದ್ಗುಣಿ, ಶಿಕ್ಷಣ ಪ್ರೇಮಿ, ಅಭಿವೃದ್ಧಿಯ ಹರಿಕಾರ ಸುರೇಶ ಅಂಗಡಿ ಇನ್ನಿಲ್ಲ. ಮಾಹಾಮಾರಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಅವರು ಬೆಳಗಾವಿ ಸಂಸದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸುರೇಶ್ ಅಂಗಡಿ ಅವರಿಗೆ ಸೆಪ್ಟೆಂಬರ್ 11 ರಂದು ಅಧಿವೇಶನಕ್ಕೆ ತೆರಳಿದ್ದಾಗ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಚಿಕಿತ್ಸೆಗೆ ಪಲಿಸದೆ ಇಂದು ಮೃತಪಟ್ಟಿದ್ದಾರೆ. ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾ ಇದ್ದಾರೆ. ಮಗಳು ಶ್ರದ್ಧಾ ಅವರ ವಿವಾಹವನ್ನು ಶಾಸಕ, ಜಗದೀಶ ಶೆಟ್ಟರ್ ಅವರ ಪುತ್ರನೊಂದಿಗೆ ನೆರವೇರಿಸಿದ್ದರು.

ಅವರು ಲಿಂಗಾಯತ– ಬಣಜಿಗ ಸಮುದಾಯಕ್ಕೆ ಸೇರಿದ ಸುರೇಶ ಅಂಗಡಿ ಬೆಳಗಾವಿ ಜಿಲ್ಲೆಯ ಕೆಕೆ ಕೊಪ್ಪ ಗ್ರಾಮದಲ್ಲಿ 1955 ರ ಜನವರಿ 1 ರಂದು ಜನನಿಸಿದರು. ತಾಯಿ ಸೋಮವ್ವ ಅಂಗಡಿ, ತಂದೆ ಚನ್ನಬಸಪ್ಪ ಅಂಗಡಿ.
ತಮ್ಮ ಶಿಕ್ಷಣವನ್ನು ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಕಾಂ, ಎಲ್ಎಲ್‌ಬಿ ಓದಿದ್ದಾರೆ. 2004 ರಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು.

ಇದೇ ಮೊದಲ ಬಾರಿಗೆ ಮೋದಿ ಸಂಪುಟದಲ್ಲಿ ಕೇಂದ್ರ ರಾಜ್ಯ ರೈಲ್ವೇ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದರು. ಸಿಮೆಂಟ್ ಉದ್ಯಮದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದರು.
ಅಂಗಡಿ ಪ್ರತಿಷ್ಠಾನದ ಮೂಲಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನೂ ಹೊಂದಿದ್ದರೂ. ಬಿಜೆಪಿ ಪ್ರಮುಖ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು ಸುರೇಶ ಅಂಗಡಿ.