ದೆಹಲಿ :ಸುರೇಶ ಅಂಗಡಿಯ ಪಾರ್ಥಿವ ಶರೀರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿದ್ದು. ಬೆಳಗಾವಿಗೆ ಮೃತದೇಹ ಕೊಂಡೊಯ್ಯಲು ಅನುಮತಿ ಸಿಗದ ಹಿನ್ನೆಲೆ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಿನಲ್ಲಿ ನಡೆಸಬೇಕೆಂದು ಅವರ ಕುಟುಂಬಸ್ಥರ ಆಶಯವಾಗಿತ್ತು. ಆದರೆ ಕೊರೋನಾ ಸೋಂಕಿನಿಂದ ಮೃತಪಟ್ಟ ಹಿನ್ನಲೆಯಿಂದ ಬೆಳಗಾವಿಯಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ಸಿಗದ ಕಾರಣ ದೆಹಲಿಯಲ್ಲೇ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇನ್ನು ಅಂತ್ಯಕ್ರಿಯೆಗೆ ಸಂಬಂಧಪಟ್ಟಂತೆ ದೆಹಲಿಯ ಲೋಧಿ ರಸ್ತೆಯ ಚಿತಾಗಾರದಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಹಾಗೂ ಆಪ್ತವಲಯದಿಂದ ತೀರ್ಮಾನ ನೀಡಲಾಗಿದ್ದು ಕೊರೋನಾ ನಿಯಮದ ಅನುಸಾರ ಅಂತಿಮ ವಿಧಿವಿಧಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ