ಸುರೇಶ ಅಂಗಡಿ ನಿಧನಕ್ಕೆ ಕಿರಣ ಜಾಧವ ಕಂಬನಿ

  • 14 Jan 2024 , 10:26 PM
  • Belagavi
  • 115

ಬೆಳಗಾವಿ : ಕೇಂದ್ರ ರಾಜ್ಯ ರೈಲ್ವೇ ಖಾತೆ ಸಚಿವ ಸುರೇಶ ಅಂಗಡಿ ನಿಧನಕ್ಕೆ ಬೆಳಗಾವಿ ಬಿಜೆಪಿ ಮುಖಂಡ ಕಿರಣ ಜಾದವ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಸಂಸದರು, ಕೇಂದ್ರ ರಾಜ್ಯ ರೈಲ್ವೆ ಖಾತೆಯ ಸಚಿವರಾಗಿಯೂ ಒಳ್ಳೆಯ ಕೆಲಸ ಮಾಡಿದ್ದಾರೆ.

ಜನಪ್ರಿಯ ನಾಯಕರಾಗಿದ್ದರು. ಲಾಕಡೌನ್ ಆದ ಸಂದರ್ಭದಲ್ಲಿ ಕ್ರಿಯಾಶೀಲರಾಗಿ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಆಹಾರದ ಕಿಟ್ ಗಳನ್ನು ವಿತರಿಸಿದ್ದರು. ಅಷ್ಟೇ ಅಲ್ಲದೆ ಹೊರರಾಜ್ಯ ಕಾರ್ಮಿಕರಿಗಾಗಿ ಪ್ರತ್ಯೇಕ ರೈಲು ವ್ಯವಸ್ಥೆ ಮಾಡಿ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದರು.

ಇಂತಹ ವ್ಯಕ್ತಿ ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದು ನಂಬಲು ಸಾಧ್ಯ ಆಗ್ತಾಯಿಲ್ಲ. ಜೊತೆಗೆ ಅವರ ಒಡನಾಟದ ಬಗ್ಗೆ ಮಾತನಾಡಿದ ಅವರು ನನ್ನ ಜೊತೆ 25 ವರ್ಷದ ಸ್ನೇಹ ಇತ್ತು ನನಗೆ ಒಳ್ಳೆಯ ಮಾರ್ಗದರ್ಶಕರಾಗಿದ್ದರು.

ಜೊತೆಗೆ ನಾನು ರಾಜಕೀಯ ಪ್ರವೇಶಿಸಲು ಅವರೇ ಕಾರಣ ಅಂತಹ ವ್ಯಕ್ತಿ ನಮ್ಮನ್ನು ಅಗಲಿದ್ದು ಅತೀವ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆಂದು ಬಿಜೆಪಿ ಮುಖಂಡ ಕಿರಣ ಜಾಧವ ಕಂಬನಿ ಮಿಡಿದಿದ್ದಾರೆ.

Read All News