ಆನ್‌ಲೈನ್ ಕ್ಲಾಸ್ ಮಿಸ್ ಆಗಿದಕ್ಕೆ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
- 14 Jan 2024 , 10:45 PM
- kerala
- 169
ಮಲಪುರಂ: ದೇವಿಕಾ ಬಾಲಕೃಷ್ಣನ್ ಎಂಬ 9 ನೇ ವಿದ್ಯಾರ್ಥಿನಿ ಆನ್ ಲೈನ್ ಕ್ಲಾಸ್ ಮಿಸ್ ಆಗಿದ್ದತಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾಡಿಕೊಂಡಿರುವ ಘಟನೆ ಕೇರಳದ ಮಲಪುರಂ ಜಿಲ್ಲೆಯ ವಲಂಚೇರಿಯಲ್ಲಿ ನಡೆದಿದೆ ಆನ್‌ಲೈನ್ ತರಗತಿಗೆ ಹಾಜರಾಗಲು ಮನೆಯಲ್ಲಿ ಟಿವಿ ಹಾಗೂ ಸ್ಮಾರ್ಟ್ ಫೋನ್ ಇಲ್ಲ ಎನ್ನುವುದೇ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ . ಕೇರಳದಲ್ಲಿ ಟಿವಿ ಹಾಗೂ ಫೋನ್‌ಗಳ ಮೂಲಕ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿದೆ . ನಿನ್ನೆ ಸಂಜೆಯಿಂದ ಬಾಲಕಿ ಕಾಣಿಸದ ಹಿನ್ನೆಲೆ ಮನೆಯವರು ಹುಡುಕಾಟ ನಡೆಸಿದ್ದಾರೆ . ಈ ವೇಳೆ ಮನೆಯ ಪಕ್ಕದಲ್ಲಿನ ಜಾಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ .
ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ . ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು ನಾನು ಹೋಗುತ್ತಿದ್ದೇನೆ ಎಂದು ಬಾಲಕಿ ಬರೆದಿರುವುದಾಗಿ ತಿಳಿದುಬಂದಿದೆ . ಇನ್ನು ಆನ್‌ಲೈನ್ ಕ್ಲಾಸ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಗಳು ತುಂಬಾನೇ ನೋವುಪಟ್ಟುಕೊಂಡಿದ್ದಳು . ತರಗತಿಗಳು ಮಿಸ್ ಆಗುವುದರಿಂದ ಸಮಸ್ಯೆಯಾಗುತ್ತದೆ ಎಂದು ತಂದೆ ಬಾಲಕೃಷ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಅಲ್ಲದೇ ಮಗಳು ಟಿವಿ ರಿಪೇರ್ ಮಾಡುವಂತೆ ದಿನ ನಿತ್ಯ ಕೇಳಿಕೊಂಡಿದ್ದಳು . ಆದ್ರೆ ಅನಾರೋಗ್ಯ ಹಿನ್ನೆಲೆ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ . ನಮ್ಮ ಬಳಿ ದುಡ್ಡು ಕೂಡ ಇರಲಿಲ್ಲ . ಆದ್ರೆ ಮಗಳು ಈ ರೀತಿ ಮಾಡುತ್ತಾಳೆ ಎಂದು ನಾವು ಊಹಿಸಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.