ಬೆಳಗಾವಿ: ಮಗನನ್ನು ನೆನೆದು ತಾಯಿ ಕಣ್ಣೀರು ಹಾಕಿದ್ದಾರೆ ಆ ಮಹಾತಾಯಿಯ ಸಂಕಟ ನೋಡಿದರೆ ಎಂತವರಿಗಾದರು ಕರುಳು ಚೂರ್ ಎನ್ನುತ್ತೆ. ಸುರೇಶ ಅಂಗಡಿ ಅವರ ವೃದ್ಧ ತಾಯಿಯ ರೋದನೆ ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ನಿವಾಸದಲ್ಲಿ ಮುಗಿಲು ಮುಟ್ಟಿದೆ. ದೆಹಲಿಗೆ ಹೋಗುವ ಮೊದಲು ಸುರೇಶ ನನ್ನನ್ನು ಭೇಟಿ ಮಾಡಿ ಹೋಗಿದ್ದ ಒಂದು ತಿಂಗಳ ಮ್ಯಾಲೆ ಊರಿಗೆ ಬರರ್ತೆನಿ ಎಂದು ಹೇಳಿದ್ದ.
ನನ್ನ ಹೆಸರ ಮ್ಯಾಲ್ ಸಾಲಿ ಕಟ್ಟಿಸಿದ್ದ, ಬಸವಣ್ಣನ ಗುಡಿ ಕಟ್ಟಿಸಿದಾ. ಊರಾಗ ಇದ್ದವಾ ಬೆಳಗಾವಿಗೆ ಬಂದು ಅಂಗಿ ಪ್ಯಾಂಟ್ ಹೊಲಿಸಿ ಸಾಕಷ್ಟು ಕಷ್ಟ ಪಟ್ಟು ಬೆಳಸಿದ್ವಿ. ಜನಕ್ಕಾಗಿ ಸಾಕಷ್ಟ ಮಾಡಿದಾ ಈಗ ಪಾರ್ಲಿಮೆಂಟ್ ಹೋಗ್ಯಾನ್ ಎಂದು ಮಗನನ್ನು ನೆನೆದು ತಾಯಿ ಸೋಮವ್ವ ಕಣ್ಣೀರಟ್ಟಿದ್ದಾರೆ.