ಭೂ ರಹಿತ ಕುಟುಂಬದವರಿಗೆ ಭೂಮಿಯನ್ನು ಮಂಜೂರ ಮಾಡಲು ಒತ್ತಾಯ

  • 15 Jan 2024 , 12:00 AM
  • Haveri
  • 119
<p>
<strong>ಶಿಗ್ಗಾವಿ:</strong> ಭೂ ರಹಿತ ಕುಟುಂಬದವರಿಗೆ ಭೂಮಿಯನ್ನು ಮಂಜೂರ ಮಾಡಿ ಉಳುಮೆ ಮಾಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇಧಿಕೆ ಕಾರ್ಯಕರ್ತರು ತಾಲುಕಾಧ್ಯಕ್ಷ ಸಂತೋಷಗೌಡ ಪಾಟೀಲ ನೇತೃತ್ವದಲ್ಲಿ ತಹಶಿಲ್ದಾರ ಕಾರ್ಯಲಯಕ್ಕೆ ತೆರಳಿ ಶಿರಸ್ತೆದಾರರು ಜಿ.ಜಿ.ಸವಣೂರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು. ಭೂ ರಹಿತ ಕುಟುಂಬದ ವರ್ಗದ ಜನರಿಗೆ ಕೃಷಿ ಉಳುಮೆ ಮಾಡಲು ಅವಕಾಶ ಮಾಡುವಂತಾಗಬೇಕು ಒಂದುವೇಳೆ ಅಧಿಕಾರಿಗಳು ಸರಕಾರಕ್ಕೆ ಯಾವುದೇ ರೀತಿ ಮಾಹಿತಿಗಳನ್ನು ನೀಡದೇ ಇದ್ದಲ್ಲಿ ಆ ಭಾಗದ ಜನರಿಗೆ ಕೃಷಿ ಭೂಮಿಯನ್ನು ನೀಡದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಸ್ವರೂಪದ ಹೋರಾಟವನ್ನು ಮಾಡಬೇಕಾಗುತ್ತದೆ.
</p>

<p>
ಈ ಹೋರಾಟದಿಂದ ಉಂಟಾಗುವ ಎಲ್ಲ ರೀತಿಯ ನಷ್ಟ ಕಷ್ಟಗಳಿಗೆ ಸರಕಾರವೇ ಮತ್ತು ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವಿಜಯಲಕ್ಷ್ಮೀ ಗುಡಮಿ ಜಿಲ್ಲಾ ಮಹಿಳಾ ಅಧ್ಯಕ್ಷರು, ಶೋಭಾ ವನಹಳ್ಳಿ ಮಹಿಳಾ ತಾಲೂಕಾ ಅಧ್ಯಕ್ಷರು, ಅಜಯ ಮಾಳಗಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಸಮ್ಮ ಬಾದಾಮಗಟ್ಟಿ ಜಿಲ್ಲಾ ಮಹಿಳಾ ಉಪಾಧ್ಯಕ್ಷರು, ಶಂಕರ ಬಡಿಗೇರ ತಡಸ ಗ್ರಾ,ಘ.ಅಧ್ಯಕ್ಷರು, ಈರಣ್ಣ ಸಮಗೊಂಡ ಧುಂಡಶಿ ಗ್ರಾ.ಘ ಅಧ್ಯಕ್ಷರು, ಮಂಜುನಾಥ ಬಡಿಗೇರ ತಿಮ್ಮಾಪೂರ ಗ್ರಾ.ಘ ಅಧ್ಯಕ್ಷರು, ಖಾಜಾಮೋದಿನ ಬುಡ್ನೆನವರ ಬಂಕಾಪುರ ಹೋಬಳಿ ಗ್ರಾ.ಘ ಅಧ್ಯಕ್ಷರು, ಗದಿಗೆಮ್ಮ ಹಿರೇಮಠ ಧುಂಡಶಿ ಹೋಬಳಿ ಘಟಕ ಮಹಿಳಾ ಅಧ್ಯಕ್ಷರುಸೇರಿದಂತೆ ಮುಕ್ತುಂ ಹೊನ್ನಿಕೇರಿ, ಮೈನು ಹಂಚಿನಾಳ, ಅನ್ವರಸಾಬ ಅರಳಿಕಟ್ಟಿ, ದಾವಲಸಾಬ ಸಿಕಂದರ, ಗಂಗಾಧರ ಬೆಂಡಲಗಟ್ಟಿ, ಶೇಖಪ್ಪ ಹರಿಜನ, ಮೋದಿನಬೀ ಪರಸಾಪೂರ, ಮಂಜವ್ವ ಹುಲಗೂರ, ಸಾಧೀಕ ಯಲಿಗಾರ, ಬಾಬುಲಾಲ ತಾಸೇವಾಲೆ, ನಿಂಗಪ್ಪ ಹಡಪದ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ತಾಲೂಕು ಮತ್ತು ಜಿಲ್ಲಾ ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಹಾಜರಿದ್ದರು.
</p>

Read All News