ಸಿಂಹಾಸನಾಧೀಶ ಲಿ.ಶಿವಕುಮಾರ ಶಿವಾಚಾರ್ಯ ಶ್ರೀಗಳ 28ನೇಯ ವರ್ಷದ ಪುಣ್ಯಸ್ಮರಣೆ

  • 15 Jan 2024 , 3:34 AM
  • Haveri
  • 260

ರಾಣೇಬೆನ್ನೂರ: ಸಮಾಜದ ಏಳಿಗೆಗಾಗಿ ನಿರಂತರವಾಗಿ ದುಡಿದು, ಶಿಷ್ಯವರ್ಗ ದಿಟ್ಟತನದಿಂದ ಬದುಕಲು ಕಲಿಸಿದ ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸ್ಮರಣಿ ಮಾಡಿಕೊಂಡು ಮುನ್ನಡೆಯೋಣ. ಗುರುಗಳ ಮಾರ್ಗದರ್ಶನದಂತೆ ಜೀವಿಸೋಣ ಎಂದು ಜಿ.ಬಿ.ಮಾಸಣಗಿಕರೆ ನೀಡಿದರು. ನಗರದ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಗುರುವಾರ ಸಿಂಹಾಸನಾಧೀಶ ಲಿ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 28ನೇ ವರ್ಷದ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದ ಅವರು ಸಾಧು ವೀರಶೈವ ಸಮಾಜದ ತಾಲೂಕ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಪಿಎಂಸಿ ಸದಸ್ಯ ಜಿ.ಎಸ್.ಕರೇಗೌಡ್ರ, ಮಂಜುನಾಥ ಗೌಡಶಿವಣ್ಣನವರು, ಛೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ಅಶೋಕ ಗಂಗನಗೌಡ್ರ, ಅಶೋಕ ಹೊಟ್ಟಿಗೌಡ್ರ, ಮರಬಸಪ್ಪ ಹೊಂಬರಡಿ, ಸಿ.ಬಿ.ಸಣ್ಣಗೌಡ್ರ, ಸೋಮು ಗೌಡಶಿವಣ್ಣನವರು, ಸಿ.ಸಿ.ಪಾಟೀಲ, ಲೋಕೇಶ್ ನರಸಗೋಂಡರ, ಮಂಜು ಬೆನ್ನಟ್ಟಿಕೊಂಡು ಸೇರಿದಂತೆ ಮತ್ತಿತರುಇದ್ದರು.

Read All News