ಕೋರೊನಾ ವೈರಸ್ ಬಗ್ಗೆ ಭಯ ಬೇಡ, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀ

  • 8 Jan 2024 , 4:24 PM
  • Belagavi
  • 106
ಬೆಳಗಾವಿ: ಕೊರೊನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದು ತೀಕ್ಷ್ಣವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ, ಇದರಿಂದ ಜನರು ಭಯ ಭೀತರಾಗಬೇಕಾಗಿಲ್ಲ. ಸೂಕ್ಷ್ಮತೆ ಹಾಗೂ ಜಾಗರೂಕತೆಯಿಂದ ವರ್ತಿಸುವ ಮೂಲಕ ಕೊರೊನಾ ವೈರಸ್ ಹರಡುವಿಕೆಯಿಂದ ಪಾರಾಗುವ ಕಡೆಗೆ ಗಮನ ಹರಿಸಬೇಕು. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮೆಲ್ಲಿಂದ ಮೇಲೆ ಸ್ಯಾನಿಟೈಸರ್ ಬಳಸುತ್ತಿರಬೇಕು ಈ ರೀತಿ ಜನರು ಮುಂಜಾಗ್ರತಾ ಕ್ರಮಗಳನ್ನು ನಿಯಮಿತವಾಗಿ ಪಾಲಿಸಿದರೆ ಮಹಾಮಾರಿಯಾದ ಕೋರೊನಾ ವೈರಸನ್ನು ಹೊಡೆದೋಡಿಸಬಹುದಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ ಎಂದು ನಾಗನೂರು ರುದ್ರಾಕ್ಷಿಮಠದ ಪ.ಪೂ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಜನರಲ್ಲಿ ಮನವಿ ಮಾಡಿದ್ದಾರೆ. ಕೋರೊನಾ ನಿಯಂತ್ರಿಸುವಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಅದಕ್ಕೆ ಜನರ ಸ್ಪಂದನೆಯು ಅಗತ್ಯವಾಗಿದೆ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಶ್ರೀಗಳು ಜನರಲ್ಲಿ ವಿನಂತಿಸಿದ್ದಾರೆ.

Read All News