ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ (74) ಇನ್ನಿಲ್ಲ. ಕೋಟ್ಯಂತರ ಜನರ ಮನದಲ್ಲಿ ಜಾಗ ಪಡೆದ ಗಾನ ದಿಗ್ಗಜ ಎಸ್ ಪಿ ಬಿ ಕೊರೋನಾ ಸೋಂಕಿನಿಂದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಚರಣ್ ತಿಳಿಸಿದ್ದಾರೆ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸುಮಾರು 50 ವರ್ಷಗಳಿಂದ 16 ಭಾಷೆಗಳಲ್ಲಿ ಹಾಡುಗಳನ್ನು ಹಾಡಿರುವ ಬಾಲಸುಬ್ರಹ್ಮಣ್ಯಂ ಅವರ ಜನನವಾಗಿದ್ದು 1946 ರ ಜೂನ್ 4 ರಂದು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನಿಸಿದ್ದರು.

ಅನೇಕ ಭಾಷೆಗಳಲ್ಲಿ ಹಾಡುವ ಮೂಲಕ ಕೋಟ್ಯಂತರ ಜನರ ಮನದಲ್ಲಿ ಜಾಗ ಪಡೆದ ಗಾನ ದಿಗ್ಗಜ ಎಸ್ಪಿ ಬಾಲಸುಬ್ರಹ್ಮಣ್ಯಂ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಆಂಧ್ರದಲ್ಲಿ ಹುಟ್ಟಿ ಬೆಳೆದರೂ ಅವರು ಹಾಡಿದ ಎರಡನೇ ಹಾಡು ಕನ್ನಡದ್ದು ಎಂದು ಆಗಾಗ ಹೆಮ್ಮೆಯಿಂದ ಹೇಳುತ್ತಿದ್ದರು.ಕನ್ನಡದಲ್ಲಿ ಹಾಗೂ ಇಡೀ ದೇಶದಲ್ಲಿ ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅದ್ವಿತೀಯ ಸಾಧನೆ.

ಗಾಯನವಷ್ಟೇ ಅಲ್ಲದೆ, ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಧ್ವನಿದಾನ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆ ಮುಂತಾದವುಗಳಲ್ಲೂ ಸಾಧನೆ ಮಾಡಿದ್ದಾರೆ. ಕನ್ನಡದ ಎದೆ ತುಂಬಿ ಹಾಡುವೇನು ಕನ್ನಡದ ಪ್ರಮುಖ ಕಾರ್ಯಕ್ರಮ ನಡೆಸಿಕೊಟ್ಟ ಸಂಗೀತ ಮಾಂತ್ರಿಕ, ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ 25 ಬಾರಿ ನಂದಿ ಪ್ರಶಸ್ತಿ ಗಳನ್ನೂ ಎಸ್.ಪಿ.ಬಿ ತನ್ನದಾಗಿಸಿಕೊಂಡಿದ್ದಾರೆ.

40 ಸಾವಿರ ಗಾನ ಸುಧೆಗಳನ್ನು ಹಾಡಿ ಗಿನ್ನಿಸ್ ದಾಖಲೆ ಬರೆದ ಗಾನ ಗಾರುಡಿ ಕನ್ನಡ, ತೆಲಗು ಹಿಂದಿ,ತಮಿಳ ಹೀಗೆ ಹದಿನಾರಯ ಭಾಷೆಗಳಲ್ಲಿ ತಮ್ಮ ಸಂಗೀತ ಸ್ವರದ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ.

ನೆನಪಾದರೆನಾನುಹಂಪೆಯಚರಿತೆಯಬೆರೆವೆಮಂಜಾದರೆನಾನುಕೊಡಗಿನಶಿರದಲಿಮೆರೆವೆಬೆಳಕಾದರೆನಾನುಕರುನಾಡಿಗೆಕಿರಣವಸುರಿವೆಸ್ವರವಾದರೆನಾನುದಾಸರಕಂಟದಿನಲಿವೆಖಡ್ಗವಾದರೆನಾನುಚೆನ್ನವ್ವನಕರದಲಿಮೆರೆವೆಮರವಾದರೆನಾನುಒಬ್ಬವನಒನಕೆಯಬೆರೆವೆ

ಸಂಗೀತ ಲೋಕಕ್ಕೆ ತಮ್ಮದೆ ಯಾದ ಅಪಾರ ಕೊಡುಗೆ ಯನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸಲ್ಲಿಸಿದ್ದಾರೆ. ಎಸ್ ಪಿ ಬಿ ತಮ್ಮ ಸ್ವರ ಮಾಂತ್ರಿಕ ಶಕ್ತಿಯನ್ನು ನಿಲ್ಲಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.
ಅವರ ಹಾಡುಗಳು ಸದಾಕಾಲವೂ ಪ್ರೇರಣಿಯವಾಗಿವೆ. ಇಗ ಅವರಿಲ್ಲ ಆದರು ಅವರು ಹಾಡಿದ ಹಾಡುಗಳು ಇನ್ನು ಜೀವಂತ ವಾಗಿವೆ.