ಭ್ರಷ್ಟಾಚಾರ ವಿರೋಧಿ ಜನ ಅಂದೋಲನ ನ್ಯಾಸ ರಾಜ್ಯಸಂಚಾಲಕ; ಮಲ್ಲೇಶ ಪ್ಪಚಿಕ್ಕಣ್ಣನವರ

  • 15 Jan 2024 , 2:17 AM
  • Haveri
  • 198

ಬ್ಯಾಡಗಿ: ಆಶ್ರಯ ಮನೆಯ ನಿರ್ಮಿಸಲು ನಿವೇಶನ ಹಂಚಿಕೆ ವಿಳಂಭನೀತಿಯನ್ನು ಖಂಡಿಸಿ ಅ.೨ ರಿಂದ ಆರಂಭವಾಗುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪುರಸಭೆ ವತಿಯಿಂದ ನೀರು, ನೆರಳು ಹಾಗೂ ಇತರೆ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪ್ರಜಾರ ಇವರಿಗೆ ಭ್ರಷ್ಟಾಚಾರ ವಿರೋಧಿ ಜನ ಅಂದೋಲನ ನ್ಯಾಸರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮನವಿ ಪತ್ರ ಸಲ್ಲಿಸಿದರು. ಬಳಿಕ ಮಾತನಾಡಿ, ೨೦೧೬ ರಲ್ಲಿ ಪುರಸಭೆ ವತಿಯಿಂದ ೨ ಕೋ.ರೂ.ಖರ್ಚುಮಾಡಿ ೧೦ ಎಕರೆ ಜಮೀನನ್ನು ಮಲ್ಲೂರು ರಸ್ತೆಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡುವುದಕ್ಕಾಗಿ ಖರೀದಿಸಿದೆ. ಸಾವಿರಾರು ಬಡವರು ನಿವೇಶನಗಳಿಲ್ಲದೆ, ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ.

ಮೆಣಸಿನಕಾಯಿ ತುಂಬು ಬಿಡಿಸುವುದು ಸೇರಿದಂತೆ ಹತ್ತಾರು ಬಗೆಯಲ್ಲಿ ಕೂಲಿ ಮಾಡಿತಿನ್ನುವ ಸಾವಿರಾರು ಜನ ಮನೆಯಿಲ್ಲದೆ ಪರದಾಡುತ್ತಿದ್ದಾರೆ. ತಿಂಗಳಾಗುತ್ತಲೆ ಬಾಡಿಗೆ ಮನೆಗೆ ಹಣಕಟ್ಟುವಲ್ಲಿ ಸಂಕಟಪಡುತ್ತಿದ್ದಾರೆ. ಸಾಕಷ್ಟು ಬಾರಿ ನೂರಾರು ಮಹಿಳೆಯರು ಪುರಸಭೆಎದುರು ಪ್ರತಿಭಟನೆ ನಡೆಸಿದ್ದಾರೆ. ಆದರೂ ನಿವೇಶನ ನೀಡುವುದು ವಿಳಂಭವಾಗುತ್ತಿದೆ. ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸುವಂತೆ ಮನವಿ ಮಾಡಿದರು. ಭ್ರಷ್ಟಾಚಾರ ವಿರೋಧಿಜನ ಅಂದೋಲನ ನ್ಯಾಸಅಣ್ಣಾ ಹಜಾರೆ ನೇತೃತ್ವದ ಸಮಿತಿಯಾಗಿದ್ದು, ದೇಶಮಟ್ಟದಲ್ಲಿ ದೊಡ್ಡ ಸಂಘಟನೆಯಿದೆ. ದೇಶದ ವಿವಿಧ ರಾಜ್ಯಗಳಿಂದ ಮುಖಂಡರು ಅವ್ಮರಣಾಂತ ಉಪವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುರಸಭೆಯ ನಿರ್ಲಕ್ಷö್ಯ ದ್ಯೋರಣೆಯಿಂದ ನಾವು ಉಪವಾಸ ಕುಳಿತಿದ್ದೇವೆ. ಸ್ಥಳೀಯರು ಹಾಗೂ ಹೊರ ರಾಜ್ಯದವರಿಗೆ ಅ.೨ ರಂದುಎಲ್ಲ ವ್ಯವಸ್ಥೆಯನ್ನು ಪುರಸಭೆ ಮಾಡುವಂತೆ ಮನವಿ ಪತ್ರ ನೀಡಿದ್ದಾರೆ.

Read All News