ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಪ್ರತಿಭಟನೆ

  • 15 Jan 2024 , 2:19 AM
  • Bengaluru
  • 113

ರಾಣೇಬೆನ್ನೂರ: ಕೇಂದ್ರ ಸರಕಾರ ರೈತ ವಿರೋಧಿ ಮಸೂದೆ ಜಾರಿಗೊಳಿಸಿರುವ ನಿರ್ಧಾರದ ವಿರುದ್ಧ ತಾಲೂಕಿನ ಚಳಗೇರಿ ರಾಷ್ಟಿçÃಯ ಹೆದ್ದಾರಿ-೪೮ರ ಟೋಲ್‌ಗೆಟ್ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ)ದ ನೇತೃತ್ವದಲ್ಲಿ ನೂರಾರು ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಭೂ ಸುಧಾರಣೆಕಾಯ್ದೆ, ಎಪಿಎಂಸಿ ಕಾಯ್ದೆ ಮಾರಕವಾಗಿವೆ. ಇವುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಮಯದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ. ಕೇಂದ್ರ ಸರಕಾರವು ಸುಗ್ರೀವಾಜ್ಞೆಗಳ ಮೂಲಕ ಭೂ ಸುಧಾರಣಾಕಾಯ್ದೆ. ಎಪಿಎಂಸಿ. ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದು ರೈತರಿಗೆ ಮರಣ ಶಾಸನ ಬರೆಯಲು ಯತ್ನಿಸಿದೆ. ಭೂ ಸ್ಮಧಾರಣೆ ಕಾಯ್ದೆಯಿಂದ ರೈತರ ಜಮೀನುಗಳು ಕಾರ್ಖಾನೆ, ರಿಯಲ್ ಎಸ್ಟೇಟ್ ಸೇರಿ ಇತರ ಉದ್ಯಮೆದಾರರ ಪಾಲಾಗಲಿವೆ. ಕೃಷಿ ಜಮೀನುಗಳನ್ನು ರೈತರ ಬದಲು ಖಾಸಗಿ ವ್ಯಕ್ತಿಗಳೇ ಖರೀದಿಸುವವರು ಹೆಚ್ಚಾಗಲಿದ್ದಾರೆ. ಇದರಿಂದ ಮುಂದಿನ ದಿನದಲ್ಲಿ ಕೃಷಿ ಭೂಮಿ ಕಿಂಚಿತ್ತೂ ಉಳಿಯದ ಪರಿಸ್ಥಿತಿ ನಿರ್ಮಾಣವಾಗಲಿದೆ.ಆದ್ದರಿಂದ ಭೂ ಸುಧಾರಣೆಕಾಯ್ದೆಗೆತಂದಿರುವತಿದ್ದುಪಡಿ ಕೈ ಬಿಡಬೇಕುಎಂದು ಆಗ್ರಹಿಸಿದರು. ಎಪಿಎಂಸಿ ಕಾಯ್ದೆಯಿಂದಾಗಿರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆದೊರಕದ ಸ್ಥಿತಿ ನಿರ್ಮಾಣವಾಗಿದೆ.ಎಪಿಎಂಸಿ ಹಮಾಲರು, ವ್ಯಾಪಾರಸ್ಥರು ಬೀದಿ ಬರುವ ಪರಿಸ್ಥಿತಿ ಎದುರಾಗಲಿದೆ.ಆದ್ದರಿಂದಕೇAದ್ರ ಸರ್ಕಾರ ಎಪಿಎಂಸಿ ತಿದ್ದುಪಡಿಕಾಯ್ದೆಯನ್ನು ಹಿಂಪಡೆಯಬೇಕುಎAದು ಒತ್ತಾಯಿಸಿ ಸ್ಥಳಕ್ಕೆ ಬಂದ ತಹಸೀಲ್ದಾರ್ ಬಸನಗೌಡಕೋಟೂರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಸ್.ಡಿ. ಹಿರೇಮರ, ಸುರೇಶಪ್ಪ ಗರಡಿಮನಿ, ಬಸಣ್ಣ ಕೊಂಗಿ, ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಬಸವರಾಜಯಲ್ಲಕ್ಕನವರ, ಬಿ.ಕೆ. ರಾಜನಹಳ್ಳಿ, ನಾಗರಾಜ ಸೂರ್ವೆ, ಯಲ್ಲಪ್ಪಚಿಕ್ಕಣ್ಣನವ, ರಂಗಪ್ಪ ತಳವಾರ, ಚಂದ್ರಣ್ಣ ಬೇಡರ, ಶಿವು ಮಾಕನೂರ, ಮಂಜು ಸಾವಂತ್ಲವರ ಸೇರಿದಂತೆ ಮತ್ತಿತರರು ಇದ್ದರು.

Read All News