ಕಳಪೆ ಕಾಮಗಾರಿ ನಗರಸಭೆ ಸದಸ್ಯರ ಪ್ರತಿಭಟನೆ

  • 15 Jan 2024 , 3:35 AM
  • Haveri
  • 237

ರಾಣೇಬೆನ್ನೂರ: ನಗರದ ಬಹುನಿರೀಕ್ಷಿತ24*7 ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿ ನಗರಸಭಾ ಸದಸ್ಯರು ಶುಕ್ರವಾರ ನಗರಸಭೆ ಕಾರ್ಯಾಲಯದ ಎದುರು ನಿರಂತರ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ನಗರಸಬೆ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಅಮೃತ ಸಿಟಿ ಯೋಜನಡಿಯಲ್ಲಿ ಸುಮಾರು 118 ಕೋಟಿ ವೆಚ್ಚದ 24*7 ಕುಡಿಯುವ ನೀರಿನಕಾಮಗಾರಿಸಂಪೂರ್ಣಕಳಪೆಯಾಗಿದ್ದು, ಎರಡು ತಿಂಗಳ ಹಿಂದೆ ನಗರಸಭೆಯಎಲ್ಲಾ 34 ಸದಸ್ಯರುಕಾಮಗಾರಿ ಕಳಪೆಯಾಗಿದೆಎಂದು ಸಹಿ ಮಾಡುವ ಮೂಲಕ ನಗರಾಭಿವೃದ್ಧಿ ಸಚಿವರು ಹಾಗೂ ಕೇಂದ್ರದ ಸಚಿವರಿಗೂ ಮನವಿ ಮಾಡಲಾಗಿತ್ತು. ಆದರೆ ಇದರ ಬಗ್ಗೆ ಅಧಿಕಾರಿಗಳಾಗಲಿ, ಶಾಸಕರಾಗಲಿ ಹಾಗೂ ಸಚಿವರಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ಕಾಮಗಾರಿ ಮಾಡುವ ಗುತ್ತಿಗೆದಾರರು ಪೈಪಲೈನ್‌ವನ್ನು ಚರಂಡಿ ಮಧ್ಯೆ ಮತು ್ತರಸ್ತೆ ಮೇಲೆ ಹಾಕಿದ್ದಾರೆ. ಯೋಜನ ವರದಿ ಪ್ರಕಾರ ಪೈಪಲೈನ್ ಮೂರು ಅಡಿ ಆಳ ಮತ್ತು 3 ಅಡಿ ಅಗಲ ಹಾಕಬೇಕಾಗಿದೆ. ಆದರೇ ಇದನ್ನು ಯಾವುದನ್ನು 24*7 ಯೋಜನೆಯ ಅಧಿಕಾರಿಗಳಾಗಲಿ ಹಾಗೂ ಗುತ್ತಿಗೆದಾರರು ಮಾಡಿಲ್ಲ. ನಗರದಲ್ಲಿ ಕಾಮಗಾರಿ ಸಲುವಾಗಿ ಸುಮಾರು 160 ಕಿ.ಮಿ. ರಸ್ತೆಗಳನ್ನು ಅಗೆಯಲಾಗಿದೆ. ಇದನ್ನು ದುರಸ್ತಿ ಮಾಡುವ ಗೋಜಿಗೆ ಇಲ್ಲಿಯವರಿಗೂ ಗುತ್ತಿಗೆದಾರರು ಹೋಗಿಲ್ಲ. ಕೆಲವೊಂದು ಕಡೇ ಮಾಡಿದರೂ ಸಹಿತ ಅದುಕೂಡ ಕಳಪೆಯಾಗಿ ಕಿತ್ತು ಹೋಗಿದೆ ಇದರಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ನೀರು ಸರಬರಾಜು ಮಾಡಲು ಐದು ಹೊಸ ಟ್ಯಾಂಕ್ ಸಹ ನಿರ್ಮಾಣ ಮಾಡಲಾಗಿದ್ದು, ಅವುಗಳು ಸಹ ಸಂಪೂರ್ಣ ಕಳಪೆಯಾಗಿದೆ ಎಂದುಎಲ್ಲಾ ಅಧಿಕಾರಿಗಳು ಗಮನಕ್ಕೆ ತರಲಾಗಿದೆ.

ಆದರೆ ಇದರ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಅಲ್ಲದೆ ಅಚಿದು ಎಲ್ಲಾ ಸದಸ್ಯರು ಕಾಮಗಾರಿ ವಿರುದ್ಧ ಸಹಿ ಮಾಡಿದ್ದರು.ಆದರೆ ಇಂದು ಪ್ರತಿಭಟನೆಗೆ ಬಾರದಿರುವುದು ಹಲವು ಅನುಮಾನಕ್ಕೆಕಾರಣವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗ್ಗೆಹರಿಸುವರಿಗೂ ಪತ್ರಿಭಟನೆ ನಿಲ್ಲಿಸುವುದಿಲ್ಲ ಎಂದರು. ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರು ಮಾತನಾಡಿ, ಈ ಹಿಂದೆ ನಗರದಲ್ಲಿ ಒಳಚರಂಡಿ ಕಾಮಗಾರಿಕೂಡ ಇದೇ ರೀತಿ ಕಳಪೆಯಾಗಿ ಈಗ ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಈಗ 24*7 ಕುಡಿಯುವ ನೀರಿನ ಕಾಮಗಾರಿ ಕೂq ಅದೇ ರೀತಿಯಾದರೇ ಹೇಗೆ. ನಗರದ ಪ್ರಮುಖ ಯೋಜನೆಗಳನ್ನೆ ಈ ರೀತಿ ಹಳ್ಳ ಹಿಡಿಸಿ ಸಮಸ್ಯೆಯನ್ನುತರುವುದುಎಷ್ಟರ ಮಟ್ಟಿಗೆ ಸರಿಯಾಗಿದೆ.ಕೂಡಲೇ ಸಚಿವರೂ, ಶಾಸಕರೂ ಹಾಗೂ ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗ್ಗೆಹರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಶಶಿಧರ ಬಸೇನಾಯ್ಕರ್, ಶೇಖಣ್ಣ ಹೊಸಗೌಡ್ರ, ನಾಗರಾಜ ಪವಾರ, ಜಯಶ್ರೀ ಪೀಸೆ, ಚಂಪಾ ರಮೇಶ ಬೀಸಲಹಳ್ಳಿ, ನೀಲಮ್ಮಮಾಕನೂರು, ನೂರಲ್ಲಾಖಾಜಿ, ಮೆಹಬೂಬ್ ಮುಲ್ಲಾ, ಸುಮಾರವಿ ಹುಚ್ಚಗೊಂಡರ, ಸುವರ್ಣ ಸುಳ್ಳಿಕೇರಿಮಠ್, ನಾಗರಾಜ ಮಾಕನೂರು, ಬಸವರಾಜ ಹುಚ್ಚಗೊಂಡರ ಸೇರಿದಂತೆ ಮತ್ತಿತರು ಇದ್ದರು.

Read All News