ರೆಡ್​ ಹಿಲ್ಸ್​ ಫಾರ್ಮ್‌ಹೌಸ್‌ನಲ್ಲಿ ಎಸ್.ಪಿ.ಬಿ ಅಂತ್ಯಕ್ರಿಯೆ

  • 15 Jan 2024 , 3:08 AM
  • Tamilnadu
  • 172

ಚೆನ್ನೈ: ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದ ಗಾನ ಗಾರುಡಿಗ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯ ಸಂಸ್ಕಾರ ಇಂದು ನೆರವೇರಲಿದೆ. ಚೆನ್ನೈನ ಹೊರ ಹೊಲಯದಲ್ಲಿರುವ ಎಸ್‌ಪಿಬಿ ಅವರ ಫಾರ್ಮ್‌ಹೌಸ್‌ ರೆಡ್​ ಹಿಲ್ಸ್​ನಲ್ಲಿ ಬೆಳಿಗ್ಗೆ 11 ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ರೆಡ್​ಹಿಲ್ಸ್​ನ ತೋಟದ ಮನೆ ಎಸ್​ಬಿಪಿ ನೆಚ್ಚಿನ ಸ್ಥಳ ಆಗಿತ್ತು. ಅವರ ಕುಟುಂಬಸ್ಥರು, ಸ್ನೇಹಿತರು ಇಲ್ಲಿ ಆಗಾಗ ಸೇರುತ್ತಿದ್ದರು. ಅದೇ ತೋಟದಲ್ಲಿ ಎಸ್​ಪಿಬಿ ಅವರ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. ಎಸ್.ಪಿ.ಬಿ ಅವರ ಆರೋಗ್ಯ ಚೇತರಿಕೆಗೆ ಅವರ ಅಭಿಮಾನಿಗಳು ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿದ್ದರು. ಆದರೆ, ಅದ್ಯಾವುದೂ ಫಲಿಸದೇ ನಿನ್ನೆ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

Read All News