ಕೇಂದ್ರಗೃಹ ಸಚಿವಾಲಯದಿಂದ ಪರೀಕ್ಷೆ ನಡೆಸಲು ಅನುಮತಿ
- 15 Jan 2024 , 2:08 AM
- Belagavi
- 105
ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಂಟೈನ್ನೈಂಟ್ ಝನ್‌ಗಳಲ್ಲಿ ನಡೆಸಲ್ಲ . ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಳಾಂತರಿಸಿ , ಅಲ್ಲಿ ನಿಗದಿಯಂತೆ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ .ಒಂದು ವೇಳೆ ಪರೀಕ್ಷೆ ಸಮಯದಲ್ಲೇ ಎಕ್ಸಾಂ ಸೆಂಟರ್ ಇರುವ ಪ್ರದೇಶ ಕಂಟೈನ್ನೈಂಟ್ ಝೂನ್ ಆದಲ್ಲಿ , ಆ ಭಾಗದ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ . ಜೂನ್ 25 ರಿಂದ ಶುರುವಾಗುವ ಪರೀಕ್ಷೆಯನ್ನು 8.48 ಲಕ್ಷ ಮಕ್ಕಳು ಬರೆಯಲಿದ್ದಾರೆ . ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳು ಇವೆ 17 ಜಿಲ್ಲೆಯ ಶೈಕ್ಷಣಿಕ ಪರಿಶೀಲನೆ ಮುಕ್ತಾಯವಾಗಿದೆ ಮಕ್ಕಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ನಡೆಸಲಾಗುವದು. ಒಂದು ರೋಮಿನಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಅವಕಾಶ ಪ್ರತಿಯೊಂದು ಮಗುವಿಗೆ ಸ್ಯಾನಿಟೈಸರ ಹಾಕಿ ಕೈಯನ್ನು ಶುಚಿ ಗೊಳಸಿ ಕೊಠಡಿಗೆ ಬೀಡಲಾಗುವದು. ಎಲ್ಲ ಕೇಂದ್ರಗಳಲ್ಲಿ 200 ಮಕ್ಕಳಿಗೆ ಥರ್ಮಲ್ ಸ್ಕ್ಯಾನ್ ಮಾಡುತ್ತೆವೆ ಮಕ್ಕಳಿಗೆ ಅನಾರೋಗ್ಯ ಕಂಡುಬಂದರೆ ಪ್ರತ್ಯೇಕ ಕೊಠಡಿಯಲ್ಲಿ ಕುರಿಸಿ ಪರೀಕ್ಷೆ ಬರೆಯಲು ಅವಕಾಶ, ಎಲ್ಲಾ ಮೇಲ್ವಿಚಾರಕರು ಹ್ಯಾಂಡ ಗ್ಲೌಸ್ ಬಳಸಿಲಿದ್ದಾರೆ.ಯಾವುದೇ ಕಂಟೋನ್ಮೆಂಟ್ ಜೋನ ಇರದಂತೆ ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಿದ್ದೆವೆ ಎಂದು ಇಂದು ಬೆಳಗಾವಿಯಲ್ಲಿ ಶಿಕ್ಷಣ ಸಚಿವರು ಹೇಳಿಕೆ ನೀಡಿದರು. ಶಾಲೆ ಆರಂಭಿಸುವ ಮುನ್ನ ಜೂನ್ 10 ರಿಂದ ಮೂರುದಿನಗಳ ಅವಧಿಯಲ್ಲಿ ಪೋಷಕರ ಸಭೆ ಮಾಡಲು ಸೂಚಿಸಿದ್ದೇವೆ ಎಲ್ಲಾ ಶಾಲೆಗಳಲ್ಲಿ ಆನಲೈನ್ ಕ್ಲಾಸ್ ನಡೆಸಲು ಚಿಂತನೆ ನಡೆಸಲಾಗಿದೆ, ಎಲ.ಕೆ.ಜಿ ಯು.ಕೆ.ಜಿ ಪ್ರಾರಂಬಿಸಲು ಅವಕಾಶ ವಿಲ್ಲ, ಆನಲೈನ್ ಶಿಕ್ಷಣದ ಕುರಿತು ನಿಮಾನ್ಸ್ಗೆ ಪತ್ರ ಬರೆದು ಇದರ ಸಾಧಕ ಭಾದಕಗಳ ಕುರಿತು ಚರ್ಚಿಸಲಾಗುವದು. ಮಕ್ಕಳಿ ತೊಂದರೆ ಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಪರೀಕ್ಷೆ ನಡೆಸುವುದು ಕಷ್ಟ ಆಗಬಾರದೆಂದು ಹೆಚ್ಚು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿ ಕಚೇರಿಯಲ್ಲು ಸಹಾಯವಾಣಿ ಸಂಖ್ಯೆ ಆರಂಬಿಸಲಾಗುವದು. ಇವರಿಗೆ ರಾಜ್ಯದಲ್ಲಿ 1398 ಜನರು ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ ಎಲ್ಲಾ ರೀತಿಯ ಕೋರೊನಾ ತಡೆಗಟ್ಟಲು ಸರ್ಕಾರ ಹೊರಡುತ್ತಿದೆ ಸದ್ಯಕ್ಕೆ ರಾಜ್ಯದಲ್ಲಿ 2026 ಕ್ಕಿಂತ ಹೆಚ್ಚಿನ ಜನರಲ್ಲಿ ಕೋರೊನಾ ಪಾಸಿಟಿವ್ ಬಂದಿದೆ 52 ಜನ ಸಾವನಪ್ಪಿದ್ದು ಸದ್ಯ ರಾಜ್ಯದಲ್ಲಿ ಕೋವಿಡ ಮರಣ ಪ್ರಮಾಣ ಕಡಿಮೆ ಯಾಗಿದೆ ಎಂದು ಶೈಕ್ಷಣಿಕ ಸಚಿವ ಸುರೇಶಕುಮಾರ ಹೇಳಿದ್ದಾರೆ.