ಮಂಗಳೂರು : ಡ್ರಗ್ಸ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಂಗಳೂರು ಸಿಸಿಬಿ ಪೊಲೀಸರು ನಿರೂಪಕಿ ಅನುಶ್ರೀಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಹಾಜರಾಗುವುದಾಗಿ ಹೇಳಿದ ನಿರೂಪಕಿ ಅನುಶ್ರೀ ನಾಪತ್ತೆಯಾಗಿದ್ದಾರೆ. ಶುಕ್ರವಾರ ಹಾಜರಾಗುವುದಾಗಿ ಹೇಳಿದ ಅನುಶ್ರೀ ಅಧಿಕಾರಿ ಸೇರಿದಂತೆ ಯಾರೇ ಕರೆ ಮಾಡಿದರೂ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾತ್ರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೂಡ ತಾವು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದ ಅನುಶ್ರೀ ಮಾತು ತಪ್ಪಿದ್ದಾರೆ. ಅವರ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಕೂಡ ಕಾದು ಸುಸ್ತಾದರು. ಗೈರಾಗಿರುವ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ. ನನಗೂ ಮತ್ತು ಡ್ರಗ್ಸ್ ಪಾರ್ಟಿಗಳಿಗೂ ಸಂಬಂಧವಿಲ್ಲ ಎಂದು ಹೇಳಿ ಇದೀಗ ವಿಚಾರಣೆಗೆ ಹಾಜರಾಗದಿರುವುದರಿಂದ ಸಿಸಿಬಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ದರಿಂದ ಇಂದು ತಪ್ಪದೇ ವಿಚಾರಣೆ ಹಾಜರಾಗುವಂತೆ ಕಡೆಯ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.