ಸುರೇಶ ಅಂಗಡಿ ನಿಧನಕ್ಕೆ ಮಾಜಿ ಸಚಿವ ಶಶಿಕಾಂತ ನಾಯಿಕ ಕಂಬನಿ

  • 30 Dec 2023 , 10:30 AM
  • Belagavi
  • 154

ಹುಕ್ಕೇರಿ: ಕೇಂದ್ರದ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಮಾಜಿ ಸಚಿವ ಶಶಿಕಾಂತ ನಾಯಿಕ ಕಂಬನಿ ಮಿಡಿದಿದ್ದಾರೆ. ಕಳೆದ 30 ವರ್ಷಗಳಿಂದಲೂ ಬೆಳಗಾವಿ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿ 4 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಸುರೇಶ ಅಂಗಡಿಯವರು ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರು.

ಕೇಂದ್ರ ಸಚಿವರಾದರೂ ಸರಳ, ಸಜ್ಜನಿಕೆಯನ್ನು ಹೊಂದಿದ್ದರು. ಬೆಂಗಳೂರಿನಿಂದ ನವದೆಹಲಿವರೆಗೆ ಕಿಸಾನ ರೈಲು ಓಡಿಸಿ ರೈತರ ಅಭ್ಯದಯಕ್ಕೆ ನಾಂದಿ ಹಾಡಿದರು. ಶೇಡಬಾಳದಿಂದ ಬೆಂಗಳೂರುವರೆಗೆ ನೂತನ ರೈಲು ಪ್ರಾರಂಭ ಮಾಡಿಸಿದರು. ಹುಬ್ಬಳ್ಳಿಯಲ್ಲಿ ರೈಲು ಮ್ಯುಸಿಯಂ ಸ್ಥಾಪನೆಗೆ ಕಾರಣಕರ್ತರು. ಬೆಳಗಾವಿಯಿಂದ ಧಾರವಾಡದವರೆಗೆ ನೇರ ರೈಲು ಮಾರ್ಗದ ನಿರ್ಮಾಣಕ್ಕೆ ಚಾಲನೆ ನೀಡಿದವರು ಅಂತವರ ನಿಧನದಿಂದ ಬೆಳಗಾವಿ ಜಿಲ್ಲೆ ಮತ್ತು ಕನ್ನಡ ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಕಂಬನಿ ಮಿಡಿದಿದ್ದಾರೆ.

Read All News