ಗುತ್ತಿಗೆ ಮತ್ತು ಹೊರಗುತ್ತಿಗೆ ಎಂಬ ಜೀತ ಪದ್ಧತಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ

  • 16 Dec 2023 , 1:31 PM
  • Belagavi
  • 137

ರಾಯಬಾಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳ ಎದುರು ಆಸ್ಪತ್ರೆಯ ಗುತ್ತಿಗೆ ನೌಕರರು ಸೇವೆಗೆ ಹಾಜರಾಗದೆ ಆಸ್ಪತ್ರೆಯ ಎದುರು ಸೇವೆ ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ರಜೆ ಸೌಲಭ್ಯ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕಾ ಆಸ್ಪತ್ರೆಯ ಎದುರು ಪ್ರತಿಭಟಸಿದರು.

ಸರ್ಕಾರ ನಮ್ಮ ಬೇಡಿಕೆಗಳಿಗೆ ಈ ವರೆಗೆ ಸ್ಪಂದಿಸಿಲ್ಲ ನಮಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಆರೋಗ್ಯ ಸಚಿವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರೋಗಿಗಳ ಸೇವೆಗೆ ಹಾಗೂ ಆರೋಗ್ಯ ಇಲಾಖೆ ಯೋಜನೆ ಜನರಿಗೆ ಜನರಿಗೆ ತಲುಪಿಸುವುದಕ್ಕೆ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವ ಇಲಾಖೆ ಸೌಲಭ್ಯ ಕಲ್ಪಿಸದೆ ಸತಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ಮತ್ತು ಹೊರಗುತ್ತಿಗೆ ಎಂಬ ಜೀತ ಪದ್ಧತಿಯನ್ನು ಕೈಬಿಡಬೇಕು, ನೌಕರರಿಗೆ ಬರವಸೆಗಳು ಸಾಕು, ಬೇಡಿಕೆಗಳು ಈಡೇರಬೇಕು ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ .ಕಾವೇರಿ ತಳವಾರ, ಶೈಲಾ ಕಾಂಬಳೆ, ಅಶ್ವಿನಿ ಕದಮ, ಈಶ್ವರ್ ಕಾಂಬಳೆ, ಸಂಗೀತಾ ಭಜಂತ್ರಿ ಸುಮಿತ್ರಾ ಚೌಗಲಾ, ಸುಜಾತಾ ದಳವಾಯಿ ಇನ್ನಿತರರು ಉಪಸ್ಥಿತರಿದ್ದರು.

Read All News