ಬೆಳಗಾವಿ: ಎಪಿಎಂಸಿ ತಿದ್ದುಪಡಿ ಮಸೂದೆ ಸೇರಿದಂತೆ ವಿವಿಧ ರೈತವಿರೋಧಿ ಮಸೂದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 28ರ ಸೋಮವಾರ ರೈತಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಈ ಹಿನ್ನೆಲೆ ಇಂದು ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಅಧ್ಯಕ್ಷರು ದೀಪಕ್ ಗುಡಗನಟ್ಟಿ , ಭೂ ಸುಧಾರಣೆ ರೈತ ವಿರೋಧಿ ನೀತಿಯನ್ನು ಖಂಡಿಸಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿವೆ ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಾಳೆ ತೀವ್ರ ಪ್ರತಿಭಟನೆ ಮುಖಾಂತರ ಬಿಸಿ ಮುಟ್ಟಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಈ ಮಸೂದೆಯನ್ನು ಕೈಬಿಡದೆ ಹೋದಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಲಾಗುವುದು ಎಂದು ತಿಳಿಸಿದರು.
ನಂತರ ರೈತ ಮುಖಂಡ ಜಯಶ್ರೀ ಗುರಣ್ಣವರ ಮಾತನಾಡಿ, ನಾನು ಹೆಣ್ಣಮಗಳಾಗಿ ಕೇಳತಾ ಇದ್ದೀನಿ ಈ ಮಸೂದೆ ಇಲ್ಲಿಗೆ ಕೈ ಬಿಡಬೇಕು ಇಲ್ಲವಾದರೆ. ನೀವು ಯಾವುದೇ ಹಳ್ಳಿಗಳಿಗೂ ಬಂದರು ತೀವ್ರ ಪ್ರತಿಭಟನೆ ಮೂಲಕ ನಿಮಗೆ ಬಿಸಿ ಮುಟ್ಟಿಸಲಾಗುವುದು, ಹಾಗೂ ನಾಳೆ ಕೈಯಲ್ಲಿ ಪೊರಕೆಗಳನ್ನು ಹಿಡಿದುಕೊಂಡು ಚೆನ್ನಮ್ಮ ವೃತ್ತದಿಂದ್ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.
ರೈತರು ದೇಶದ ಬೆನ್ನಲಬು ಅಂತಾರೆ. ಆದರೆ ಈಗಿನ ನಮ್ಮ ಸರ್ಕಾರ ಅಂತಹ ದೇಶದ ಬೆನ್ನೆಲುಬು ಮುರಿಯಲು ಹೊರಟಿದೆ. ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಹಾಗೂ ಕರವೇ ಮತ್ತು ದಲಿತ ಸಂಘರ್ಷ ಸಮಿತಿಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ನೀಡುವ ವ್ಯವಸ್ಥೆ ಅಂದ್ರೆ ಅದು ಕೃಷಿ ಇಲಾಖೆ. ಎಪಿಎಂಸಿ 1935 ರಲ್ಲಿ ಬ್ರಿಟಿಷ್ ಸರಕಾರ ಕೃಷಿಗೆ ಒಳ್ಳೆಯ ಯೋಜನೆ ನೀಡಿದ್ದರು.
ಅದನ್ನು ಮುರಿಯುವಂತ ಕೆಲಸ ಈಗಿನ ಬಿಜೆಪಿ ಸರಕಾರ ಮಾಡುತ್ತಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಮಸೂದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ತಿದ್ದುಪಡಿ ಮಾಡಿ ಬಲವಂತವಾಗಿ ರೈತರ ಮೇಲೆ ಅನ್ಯಾಯ ಮಾಡುತ್ತಿದೆ. ಆದ್ದರಿಂದ ರೈತಪರ, ಕನ್ನಡಪರ, ಸಂಘಟನೆಗಳು ಸಾಮೂಹಿಕ ಹೋರಾಟಕ್ಕೆ ಸ್ವಯಂ ಪ್ರೇರಿತರಾಗಿ ರೈತರ ಪರವಾಗಿ ನಾಳೆ ಬಂದಗೇ ಕರೆ ನೀಡಿವೆ. ಜಗತ್ತಿಗೆ ಅನ್ನ ನೀಡುವವನು ರೈತ ಅಂತಹ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ, ನಾಳೆ ರ್ಯಾಲಿ ಮುಖಾಂತರ ಬೆಳಗಾವಿ ಚೆನ್ನಮ್ಮ ವೃತ್ತದಿಂದ ಸುವರ್ಣ ವಿಧಾನ ಸೌಧದವರೆಗೆ ಪ್ರತಿಭಟನೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.
ಈ ಕರೆಯಿಂದ ಸರಕಾರ ರೈತ ವಿರೋಧಿ ನೀತಿಗಳನ್ನು ಕೈಬಿಡದೆ ಹೋದರೆ ರೈತರ ಹೋರಾಟ ತೀವ್ರಗೊಳ್ಳುತ್ತದೆ. ಎಂದು ಸರಕಾರಕ್ಕೆ ಎಚ್ಚರಿಕೆ ಘಂಟೆ ನೀಡಿದರು. ನಂತರ ಚನ್ನಮ್ಮ ವೃತ್ತದ ಬಳಿ ಪ್ರತಿಭಟನೆ ಮುಖಾಂತರ ಎಚ್ಚರಿಕೆ ನೀಡಿದ ಅವರು ಅನ್ನವನ್ನು ತಿನ್ನುವವರು ನಾಳೆ ರೈತರಿಗೆ ಮಾಡುವ ಪ್ರತಿಭಟನೆಗೆ ಬೆನ್ನೆಲಬಾಗಿ ನಿಂತು ಸಪೋರ್ಟ್ ಮಾಡಬೇಕು ನಾಳೆ ನಡೆಯುವ ಬೃಹತ ಪ್ರತಿಭಟನೆಗೆ ಬೆಳಗಾವಿ ಜಿಲ್ಲಾ ಎಲ್ಲಾ ಜನರು ಸಪೋರ್ಟ್ ನೀಡಬೇಕು ಎಂದು ಆಗ್ರಹಿಸಿದರು.