ಕರ್ನಾಟಕ ಬಂದಗೆ ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ

  • 15 Jan 2024 , 3:18 AM
  • Belagavi
  • 107

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಭೂಸುಧಾರಣೆ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು, ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಸಂಸ್ಥೆಗಳು, ನಗರ, ಹಾಗೂ ಖಾಸಗಿ ಸಾರಿಗೆ, ಆಟೋ ಸಂಚಾರ ಎಂದಿನಂತೆ ಇದೆ.

ಸದ್ಯದ ಪರಿಸ್ಥಿತಿ ನೋಡಿದರೆ ನಗರದಲ್ಲಿ ಬಸ್ ಸಂಚಾರ ಇದ್ದರೂ ಜನರ ಓಡಾಟ ಮಾತ್ರ ತುಸು ಕಡಿಮೆ ಇದೆ. ಹೊಟೇಲ್ ಗಳು ತೆರೆದಿದ್ದರೂ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ. ವ್ಯಾಪಾರ, ವಹಿವಾಟಿನಲ್ಲಿ ಕ್ಷೀಣತೆ ಕಂಡಿದೆ.

Read All News