ಗಸ್ತಿ ಕುಟುಂಬಕ್ಕೆ ಕಟೀಲ್ ಭೇಟಿ; ಸಾಂತ್ವಾನ

  • 2 Jan 2024 , 2:41 AM
  • Haveri
  • 155

ರಾಯಚೂರು: ಇದು ರೈತಪರ ತೀರ್ಮಾನ ಎಪಿಎಂಸಿ ತಿದ್ದುಪಡಿ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಮದ್ಯವರ್ತಿಗಳ ಹಾವಳಿ ತಡೆಯಬಹುದು. ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿರ್ಧರಿಸಬಹುದು, ಮಾರುಕಟ್ಟೆ ಒಂದೇ ಪ್ರದೇಶಕ್ಕೆ ಸೀಮಿತವಾಗಬಾರದು ಎಂಬ ನಿಲುವಿನಿಂದ ಈ ಕಾಯ್ದೆ ತಿದ್ದುಪಡಿ ತರಲಾಗಿದೆ. ನಾನು ಒಬ್ಬ ರೈತ, ಕಾಯ್ದೆಯಿಂದ ಲಾಬವಾಗುತ್ತಿದ್ದು, ನನ್ನಂತೆ ಹಲವಾರು ರೈತರು ಖುಷಿಯಾಗಿದ್ದಾರೆ. ರೈತರ ಹೆಸರಿನಲ್ಲಿ ವಿರೋಧ ಪಕ್ಷದವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು. ಅವರು ಕೋವಿಡ್ ನಿಂದ ಈಚೆಗೆ ಮೃತಪಟ್ಟ ರಾಜ್ಯ ಸಭಾ ಸದಸ್ಯ ದಿ. ಅಶೋಕ ಗಸ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ನೀಡಿ ಆನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಗಸ್ತಿ ಅವರು ಪಕ್ಷದ ಹಿರಿಯರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಕ್ಷ ಬೆಳೆಸುವ ಕೆಲಸ ಹಾಗೂ ಹಿಂದುಳಿದ ವರ್ಗಗಳ ನಾಯಕರಾಗಿಯೂ ಅನೇಕ ಕಾರ್ಯ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಈಚೆಗೆ ನಿಧನ ಹೊಂದಿದ್ದು ದುಃಖದ ಸಂಗತಿ. ಅವರ ಪತ್ನಿಗೆ ರಾಜ್ಯ ಸಭಾ ಸದಸ್ಯ ನೀಡುವ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತೆ ನಾನು ಏನು ಹೇಳುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Read All News