ಕರ್ನಾಟಕ ಬಂದ್‍ಗೆ ಕುಂದಾನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ, ಸರ್ಕಾರದ ಗಮನ ಸೆಳೆಯಲು ಬಿನ್ನ ಪ್ರತಿಭಟನೆ

  • 17 Dec 2023 , 11:21 PM
  • Belagavi
  • 111

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಭೂ ಸುಧಾರಣೆ ಮಸೂದೆ ಖಂಡಿಸಿ ವಿವಿಧ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ಈ ಬಂದಗೆ ಒಂದು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ ಮತ್ತೊಂದು ಕಡೆ ಪ್ರತಿಭಟನೆಯ ಕಾವು ಜೋರಾಗಿ ನಡೆದಿದೆ.

ಜಿಲ್ಲೆಯಲ್ಲಿ ಎಂದಿನಂತೆ ಜನ ಜೀವನ ಸಾಮಾನ್ಯವಾಗಿತ್ತು. ಆಟೋಗಳು, ಟ್ಯಾಕ್ಸಿಗಳು, ಮ್ಯಾಕ್ಸಿಕ್ಯಾಬಗಳು, ಕೆ.ಎಸ್.ಆರ್.ಟಿ.ಸಿ ಬಸಗಳ ಸಂಚರಿಸುತ್ತಿದ್ದವು. ಹೋಟೆಲ್, ಮಾಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು.

ನಗರದ ಚೆನ್ನಮ್ಮಾ ವೃತ್ತದಿಂದ ಶುರುವಾದ ಪ್ರತಿಭಟನೆ ಸುವರ್ಣವಿಧಾನ ಸೌಧದ ವರೆಗೂ ಪ್ರತಿಭಟನಾಕಾರರು ಪಾದಯಾತ್ರೆ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಗೂ ಕೆಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಕಾರ್ಮಿಕ ಹಾಗೂ ಭೂ ಸುಧಾರಣೆ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬಕೆಂದು ಘೋಷಣೆ ಕೂಗಿ ಆಗ್ರಹಿಸಿದರು. ಪಾದಯಾತ್ರೆ ಸಾಗುವ ಮದ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರ ಪ್ರತಿಕ್ರತಿಯನ್ನು ಶವಚಿತ್ರೆ ಮಾಡಿದರು.

ನಗರದ ಚೆನ್ನಮ್ಮಾ ವೃತ್ತದಲ್ಲಿ ರೈತ ಮಹಿಳೆಯರು ಪೊರಕೆ ಹಿಡಿದು ಬಿನ್ನವಾಗಿ ಪ್ರತಿಭಟನೆ ಮಾಡಿದರೆ. ರೈತ ಮುಖಂಡರು ನೇಗಿಲು, ಹಸಿರು ಶಾಲು ಹಾಕಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ನಡುವೆ ಪ್ರತಿಭಟನಾಕಾರರ ಮತ್ತು ಪೆÇಲೀಸರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆದ ಘಟನೆಗಳು ನಡೆದವು.

ಸುವರ್ಣವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ರೈತರನ್ನು ಪೋಲಿಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು. ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಲು ಮುಂದಾದ ರೈತರನ್ನು ಪೋಲಿಸರು ವಶಕ್ಕೆ ಪಡೆದರು.

ಸಂಧರ್ಭದಲ್ಲಿ ಲೋಕಲ್ ವಿವ್ಯೂ ಜೊತೆ ಮಾತನಾಡಿದ ರೈತ ಮುಖಂಡ ಸಯ್ಯದ ಕೇಂದ್ರ ಹಾಗೂ ರಾಜ್ಯದಲ್ಲಿ ಒಚಿದೇ ಸರ್ಕಾರವಿದೆ. ಜನರಿಗೆ, ರೈತರಿಗೆ ಅನೂಕೂಲ ಆಗುತ್ತೇ ಎಂದು ನಂಬಿದ್ದವರಿಗೆ ಅನಾನೂಕೂಲವಾಗಿದೆ.

ಸರ್ಕಾರ ರೈತರ ಬಗ್ಗೆ ಚಿಂತಿಸುವ ಅಗತ್ಯವಿದೆ. ಈ ಮಸೂದೆಯನ್ನು ಹಿಂಪಡೆದುಕೊಳ್ಳಬೇಕು. ಎಂದು ಆಗ್ರಹಿಸುವುದರ ಮೂಲಕ ಸಿಎಂ ಬಿ.ಎಸ್.ವೈ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೋರ್ವ ರೈತ ಗಂಗಾಧರ ಮಾತನಾಡಿ ಈ ಮಸೂದೆಯನ್ನು ಸರ್ಕಾರ ಹಿಂಪಡೆದುಕೊಳ್ಳಬೇಕು. ಇದಕ್ಕೆ ಕಾಂಗ್ರೇಸ ಹಾಗೂ ಜೆಡಿಎಸ್ ಬೆಂಬಲ ನೀಡಬಾರದು ಎಂದು ಈ ಹೇಳುತ್ತಾರೆ

Read All News