ರಾಣೇಬೆನ್ನೂರ: ಕೊರೊನಾ ಸಂಕಷ್ಟದಿಂದ ಬಳಲುತ್ತಿರುವ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕೈಗೊಳ್ಳಲು ವಿಶೇಷ ಸಾಲಸೌಲಭ್ಯ ಕಲ್ಪಿಸಬೇಕು ಹಾಗೂ ತಾಲೂಕಿಗೊಂದು ಸಹಕಾರಿ ಸ್ಥಾಪಿಸಬೇಕು ಎಂದು ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ ಆರ್.ಎಮ್. ಕುಬೇರಪ್ಪ ಹೇಳಿದರು. ತಾಲೂಕಿನ ಉಕ್ಕುಂದ ಗ್ರಾಮದಲ್ಲಿ ಪದವೀದರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದ್ದು ತಕ್ಷಣವೇ ಸರಕಾರ ಕ್ರಮ ವಹಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಶೇಕಪ್ಪ ಬೆಳಕೇರಿ, ಉಜ್ಜನಗೌಡ ಮಾಳೇನಹಳ್ಳಿ, ವೀರನಗೌಡ ಪೋಲೀಸಗೌಡ್ರ, ಮಂಜಣ್ಣ ಹಾವನೂರ, ಮಾಲತೇಶ ಬೂದಿಹಾಳ, ಈಶ್ವರಪ್ಪ ಎಳೆಹೊಳೆ, ಜಗದೇವರೆಡ್ಡಿ ಚೌರಡ್ಡಿ, ಹಣಮಂತರಡ್ಡಿ ದಬಾಳಪ್ಪನವರ, ಮಂಜಣ್ಣ ಅನ್ವೇರಿ, ಬೀರಪ್ಪ ಕೂಲೇರ ಸೇರಿದಂತೆ ಅಸುಂಡಿ, ಸರವಂದ, ಎರೇಕುಪ್ಪಿ, ತಿರುಮಲದೇವರಕೊಪ್ಪ, ಬೆನಕನಕೊಂಡ, ಜೋಯೀಸರಹರಳಲ್ಲಿ ಗ್ರಾಮಗಳ ಪದವೀಧರರು ಸಂವಾದದಲ್ಲಿ ಭಾಗವಹಿಸಿದ್ದರು.