ಅಥಣಿ: ಅಥಣಿ ತಾಲೂಕು ಆಡಳಿತ ವತಿಯಿಂದ 67ನೆಯ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಅತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಭೋಜರಾಜ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಅಥಣಿ ಪಟ್ಟಣದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಬೀದಿಗಳಲ್ಲಿ ಸಂಚರಿಸಿ ಮುಖ್ಯ ವೇದಿಕೆ ಕಡೆಗೆ ನಡೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಮಾತನಾಡಿ, ದೇಶದಲ್ಲಿ 1800 ಅಧಿಕ ಜಾತಿಗಳು ಇದ್ದರೂ ಕೂಡ ನಾವು ಎಲ್ಲರೂ ಒಂದು ಎಂದು ಬಾಳ್ತಿದ್ದೀವಿ, ನಮ್ಮ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಅನ್ಯ ಭಾಷೆಯನ್ನು ಗೌರವಿಸೋಣ ಎಂದರು.
ಈ ವೇಳೆ ಡಿವೈಎಸ್ಪಿ ಶ್ರೀಪಾದ ಜಲ್ದೆ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಶೇಖರ ಕರಬಸಪ್ಪಗೋಳ, ವಿನಯ ಪಾಟೀಲ, ಶಶಿ ಸಾಳವೆ, ಪ್ರಲ್ಹಾದ ವಾಘಮೋರೆ, ರಾಜು ಗುಡೋಡಗಿ, ಶಿವಪುತ್ರ ಯಾದವಾಡ
ಭಾಗವಹಿಸಿದರು