ಯಮಕನಮರಡಿ: ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಯಮಕನಮರಡಿ ಆರ್.ಸಿ. ಗ್ರಾಮದ ಬಳಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಂಜೂರಾದ ಕೆರೆ ಹೂಳೆತ್ತುವ ಕಾಮಗಾರಿಗೆ ತಾ.ಪಂ. ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹುಕ್ಕೇರಿ ತಾ.ಪಂ. ಕಾರ್ಯನಿರ್ವಾಹಕ ಬಿ.ಕೆ. ಲಾಳಿ, ಯುವದುರೀಣ ರವೀಂದ್ರ ಜಿಂಡ್ರಾಳಿ, ಹತ್ತರಗಿ ಪಿಡಿಓ ಆನಂದ ಹೊಳೆನ್ನವರ, ವೆಂಕಟೇಶ ದಿಕ್ಷಿತ, ಸಿದ್ದಪ್ಪ ಕುಂಟಸತ್ತಿ, ಕೂಲಿಕಾರ್ಮಿಕರು ಹಾಗೂ ಗ್ರಾ.ಪಂ. ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.