ಉತ್ತರ ಪ್ರದೇಶ ಜಂಗಲ್ ರಾಜ್ಯ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ

  • 15 Jan 2024 , 3:01 AM
  • Belagavi
  • 94

ಬೆಳಗಾವಿ: ಉತ್ತರ ಪ್ರದೇಶ ಜಂಗಲ್ ರಾಜ್ಯ ಅಂತ ಪ್ರೂವ್ ಆಗಿದೆ ಇಲ್ಲಿನ ಜನರಿಗೆ ರಕ್ಷಣೆ ಇಲ್ಲ, ಯೋಗಿ ಆದಿನಾಥ್‌ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದೆ ಅವರೇನು ಯೋಗಿನೋ ರೋಗಿನೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಇಂದು ಶುಕ್ರವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗಿ ಆದಿನಾಥ ಸರ್ಕಾರವನ್ನು ಪೊಲೀಸರು ಸರ್ವಾಧಿಕಾರಿ ರೀತಿ ವರ್ತನೆ ಮಾಡುತ್ತಿದ್ದಾರೆ. ಅವರೇನು ಯೋಗಿನೋ ರೋಗಿನೋ ಗೊತ್ತಿಲ್ಲ, ನಿನ್ನೆ ರಾಹುಲ್ ಗಾಂಧಿ ಏನ್ ತಪ್ಪು ಮಾಡಿದ್ರು, ಸಂತ್ರಸ್ತ ಯುವತಿ ಕುಟುಂಬಕ್ಕೆ ಸ್ವಾಂತನ ಹೇಳಲು ಹೋರಟಾಗ ಪೊಲೀಸರು ಅವರ ಜೊತೆ ಕೆಟ್ಟದಾಗಿ ವರ್ತಿಸಿದ್ದಾರೆ.

ಹಾಗಾದರೆ ರಾಹುಲ್ ಗಾಂಧಿ ಮಾಡಿರುವ ತಪ್ಪಾದರು ಏನು ? ಕಳೆದ ವರ್ಷ ಭೀಕರ ಪ್ರವಾಹ ಬಂದಿತ್ತು, ರಾಜ್ಯ ಸರ್ಕಾರದಿಂದ ಸಂತ್ರಸ್ತರಿಗೆ ಇದುವರೆಗೆ ಮನೆ ಕಟ್ಟಲು ಆಗಿಲ್ಲ, ಇವತ್ತಿನವರೆಗೂ ಹಣ ಕೂಡ ಬಿಡುಗಡೆ ಮಾಡಿಲ್ಲ, ಈ ವರ್ಷ ಪ್ರವಾಹಕ್ಕೆ ಸರ್ಕಾರ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಗುಡುಗಿದ್ರು.

ಸಿದ್ದರಾಮಯ್ಯ ಬ್ರಿಟಿಷರಗಿಂತ ಕೆಟ್ಟದಾಗಿ ಅಧಿಕಾರ ನಡೆಸಿದ್ದರು ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಳೀನ್ ಕುಮಾರ್ ಕಟೀಲ್ ಯಕಶ್ಚಿತ್ ರಾಜಕಾರಣಿ.

ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ . ಇವರ ಕಾಲದಲ್ಲಿ ಸಂಬಳ ಕೊಡಲು ದುಡಿಲ್ಲ ಎಂದು ತಿರುಗೇಟು ನೀಡಿದರು.

Read All News