ಬೆಳಗಾವಿ: ನಗರದಲ್ಲಿ ಇಂದು ಮಧ್ಯಾಹ್ನ ಏಕಾಏಕಿ ಸುರಿದ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಸಾಮಾನ್ಯರು ಪರಡುವಂತಾಯಿತು.
ಜೋರಾಗಿ ಸುರಿದ ಮಳೆಯ ರಭಸಕ್ಕೆ ಶ್ರೀನಗರ ಗಾರ್ಡನ್ ಕಾಂಪೌಂಡ್ ಕುಸಿದರೆ ಇನ್ನೊಂದೆಡೆ ಬಳ್ಳಾರಿ ನಾಲಾ ದಂಡೆ ಒಡೆದು ಅಲ್ಲಿಯ ನೀರು ಹಲವು ಮನೆಗಳಿಗೆ ನುಗ್ಗಿದ ಪರಿಣಾಮವಾಗಿ ಸ್ಥಳೀಯರು ತೊಂದರೆಯನ್ನು ಅನುಭವಿಸುವಂತಾಗಿದೆ. ಕೂಡಲೇ ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸ್ಥಳೀಯರ ಕೋರಿಕೆಯಾಗಿದೆ.