ಬೆಳಗಾವಿ: ಜಿಲ್ಲೆಯ ಸವದತ್ತಿ ಸಮೀಪ ಟಾಟಾಎಸ್ ಹಾಗೂ ಬುಲೇರೋ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಎಳು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಮಾರು 25 ಕ್ಕೂ ಜನರು ಧಾರವಾಡ ಜಿಲ್ಲೆಯ ಮೊರಬ ಗ್ರಾಮದ ಜಮೀನಿನಲ್ಲಿ ಕೆಲಸಕ್ಕೆ ಹೋಗಿದರು. ವಾಪಸ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸವದತ್ತಿಯಿಂದ ಧಾರವಾಡಕ್ಕೆ ಹೊರಟಿದ್ದ ಬುಲೇರೊ ವಾಹನಕ್ಕೆ ಟಾಟಾಎಸ್ ಡಿಕ್ಕಿ ಹೊಡೆದಿದ್ದು,ಸ್ಥಳದಲ್ಲೆ ಎಳು ಜನ ಸಾವನ್ನಪ್ಪಿದ್ದಾರೆ. ಹದಿನೈದಕ್ಕೂ ಹೆಚ್ಚು ಜನರು ಗಂಭೀರ ಗಾಯಗಳಾಗಿದ್ದು. ಗಾಯಾಳುಗಳನ್ನ ಹುಬ್ಬಳ್ಳಿ ಕೆಎಂಸಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಸವದತ್ತಿ ಸಿಪಿಐ ಮಂಜುನಾಥ್ ನಡುವಿನಮನಿ ಹಾಗೂ ಪಿಎಸ್ ಐ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.