ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಹಾಕಿದ ಗ್ರಾಮಸ್ಥರು

  • 15 Jan 2024 , 2:27 AM
  • Haveri
  • 103

ಬ್ಯಾಡಗಿ: ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಹಾಕಿದ ಘಟನೆ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯನು ್ನಕೂಡಲೇ ಬೇರೆಡೆಗೆ ವರ್ಗಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪಂಚಾಯತಿ ಕಾರ್ಯಾಲಯಕ್ಕೆ ಬೀಗ ಜಡದಿದ್ದಾರೆ. ಈ ವೇಳೆ ಮಾತನಾಡಿದ ಎಪಿಎಂಸಿ ಸದಸ್ಯ ಶಿವಪ್ಪ ಕುಮ್ಮೂರು, ಹತ್ತಾರು ವರ್ಷಗಳಿಂದ ಗ್ರಾಮ ಪಂಚಾಯತಿಯಲ್ಲಿ ಖಾಯಂ ಉಳಿದುಕೊಂಡ ಅಧಿಕಾರಿಗಳು, ಸ್ಥಳೀಯ ಅಭಿವೃದ್ದಿಗೆ ಸಹಕಾರ ನೀಡುತ್ತಿಲ್ಲ, ಕಾಮಗಾರಿಗಳಿಗೆ ಬಿಲ್ಲ ನೀಡಲು ಸತಾಯಿಸುವ ಮೂಲಕ ಹಣ ಕೇಳುತ್ತಿದ್ದಾರೆ ಎಂಬ ಆರೋಪವಿದೆ. ಈ ಹಿಂದೆ ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳ ಬಳಿ ಅವರ ಆರೋಪಗಳನ್ನು ಗ್ರಾಮಸ್ಥರು ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು. ಮುನಾಫ್ ಮಾಳಗಿಮನಿ ಮಾತನಾಡಿ, ಇ-ಸ್ವತ್ತು ಉತಾರ ನೀಡಲು ಗ್ರಾಮಸ್ಥರಿಗೆ ಲಂಚ ಕೇಳುವ ಮೂಲಕ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇಂತಹ ಅಧಿಕಾರಿಗಳಿಂದಗ್ರಾಮದಅಭಿವೃದ್ಧಿ ಹೇಗೆ ಸಾದ್ಯವೆಂದು ಪ್ರಶ್ನಿಸಿದರು. ಕೂಡಲೆ ಸಂಬAಧಿಸಿದ ಅಧಿಕಾರಿಗಳು ಇವರನ್ನು ವರ್ಗಾವಣೆ ಮೂಲಕ ಸ್ಥಳೀಯರಿಗೆ ನ್ಯಾಯಒದಗಿಸಬೇಕು. ಇಲ್ಲವಾದಲ್ಲಿ ಪುನ: ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದುಎಂದು ಎಚ್ಚರಿಸಿದರು. ಬಳಿಕ ತಾಲೂಕು ಪಂಚಾಯತಿ ವ್ಯವಸ್ಥಾಪಕ ಪ್ರಕಾಶ ಹಿರೇಮಠ ಪ್ರತಿಭಟನೆ ಸ್ಥಳಕ್ಕಾಗಮಿಸಿ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೇಲಿನ ಆರೋಪಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಇಲಾಖೆ ನಿಯಮದಂತೆ ಅವರನ್ನು ವರ್ಗಾಯಿಸಲುಕ್ರಮ ಕೈಗೊಳ್ಳಲಾಗುವುದು. ವಿಷಯವನ್ನು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗುವುದು. ಸಿಬ್ಬಂದಿಗಳ ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗಬಾರದು, ಬೀಗ ತೆಗೆಯುವಂತೆ ಮನವಿ ಮಾಡಿದರು. ಬಳಿಕ ಅಧಿಕಾರಿಗಳ ಭರವಸೆಯಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದೆ ಸರಿದರು. ಈ ಸಂಧರ್ಭದಲ್ಲಿ ಬಸವರಾಜ ಕುಮ್ಮೂರು, ಬಸನಗೌಡ ಸಣ್ಣಗೌಡ್ರ, ಉಳೆವೆಪ್ಪ ಬನ್ನಿಹಟ್ಟಿ, ಚನ್ನಬಸಪ್ಪ ವೀರನಗೌಡ್ರ, ನಾಗರಾಜಕೂರ್ಲಿ, ಪ್ರಕಾಶ ಕುಮ್ಮೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News